ಚಂದನ್ - ನಿವೇದಿತಾ ಕೇಕ್ ಕಟ್ ಮಾಡುದ್ರಾ..! ಅರೇ ಯಾವ ಖುಷಿಗೆ ಅಂತಿದೀರಾ..!?

ಬಿಗ್ ಬಾಸ್ ಖ್ಯಾತಿಯ ರ್ಯಾಪರ್ ಚಂದನ್ ಶೆಟ್ಟಿ ಮತ್ತು ಬಾರ್ಬಿ ಡಾಲ್ ನಿವೇದಿತಾ ಗೌಡ ಇಬ್ಬರೂ ಒಟ್ಟಿಗೆ ಸೇರಿ ಕೇಕ್ ಕಟ್ ಮಾಡಿದ್ದಾರಂತೆ. ಏನಪ್ಪಾ ವಿಶೇಷ ಅಂತ ಯೋಚನೆ ಮಾಡುತ್ತಿದ್ದೀರಾ.. ?ಚಂದನ್ ಹಾಗೂ ನಿವೇದಿತಾ ಗೌಡರ ಫ್ರೆಂಡ್ ಶಿಪ್ ಗೆ ಒಂದು ವರ್ಷವಾಯ್ತಂತೆ. ಹಾಗಾಗಿ ಕೇಕ್ ಕಟ್ ಮಾಡಿ ಸಂಭ್ರಮ ಪಟ್ಟಿದ್ದಾರೆ.
ಚಂದನ್ ಶೆಟ್ಟಿ ಹಾಗೂ ನಿವೇದಿತಾ ಗೌಡ ಪರಿಚಯ ಆಗಿದ್ದು, ಸ್ನೇಹ ಬೆಳೆದಿದ್ದು ಎಲ್ಲವೂ ಕೂಡ ಬಿಗ್ ಬಾಸ್ ರಿಯಾಲಿಟಿ ಶೋನಿಂದಾಗಿ. ಈ ಸ್ನೇಹಕ್ಕೆ ಇದೀಗ ಒಂದು ವರ್ಷದ ತುಂಬಿದೆಯಂತೆ..ಹಾಗಾಗಿ ಇಬ್ಬರೂ ಕೇಕ್ ಕಟ್ ಮಾಡಿ ಖುಷಿ ಪಟ್ಟಿದ್ದಾರೆ. ಹಾಗೇ ಇದರ ಫೋಟೊವನ್ನು ಇನ್ ಸ್ಟ್ರಾಗ್ರಾಮ್ ನಲ್ಲಿ ಕೂಡ ಹಂಚಿಕೊಂಡಿದ್ದಾರೆ. ತಮ್ಮಿಬ್ಬರ ಸ್ನೇಹ, ಅದರ ಪ್ರಾಮುಖ್ಯತೆಯ ಕುರಿತು ಇನ್ ಸ್ಟ್ರಾಗ್ರಾಮ್ ನಲ್ಲಿ ಇಬ್ಬರು ಬರೆದುಕೊಂಡಿದ್ದಾರೆ.
Comments