'ಮಿ ಟೂ' ಅಭಿಯಾನದಲ್ಲಿ ಪುರುಷರ ಪರ ನಿಂತ ಸ್ಯಾಂಡಲ್’ವುಡ್ ನಟಿ ಮಾನ್ವಿತಾ

ಇತ್ತಿಚೆಗೆ ಸಾಮಾಜಿಕ ಜಾಲತಾಣದಲ್ಲಿ ಹೆಚ್ಚು ಸುದ್ದಿಯಲ್ಲಿರುವ ಮೀ ಟೂ ಅಭಿಯಾನಕಕ್ಕೆ ಬೆಂಬಲ ಸೂಚಿಸಿದವರು ಮಹಿಳೆಯ ಪರವಾಗಿ ಮಾತನಾಡಿದರೆ, ಸ್ಯಾಂಡಲ್ ವುಡ್ ನಟಿ ಟಗರು ಪುಟ್ಟಿ ಮಾನ್ವಿತಾ ಮಾತ್ರ ಪುರುಷರ ಪರವಾಗಿ ನಿಂತಿದ್ದಾರೆ.
'ತಾರಕಾಸುರ' ಸಿನಿಮಾದ ಆಡಿಯೋ ಲಾಂಚ್ ಕಾರ್ಯಕ್ರಮದ ಸಂದರ್ಭದಲ್ಲಿ 'ಮಿ ಟೂ' ಅಭಿಯಾನದ ಬಗ್ಗೆ ಮಾತನಾಡಿದ ಮಾನ್ವಿತಾ ಹುಡುಗ ನೋಡಿದ ತಕ್ಷಣ, ರೇಗಿಸಿದ ತಕ್ಷಣ ಅದನ್ನು ಲೈಂಗಿಕ ಕಿರುಕುಳ ಅಂತ ಭಾವಿಸಬೇಡಿ. ಅಲ್ಲದೇ ಮಿ ಟೂ' ವನ್ನು ಸುಮ್ಮನೆ ಪ್ರಚಾರಕ್ಕೋಸರ ಯಾರು ಬಳಸಿಕೊಳ್ಳಬಾರದು ಎಂದು ಹುಡುಗಿಯರ ಬಳಿ ಮನವಿಯನ್ನು ಮಾಡಿಕೊಂಡಿದ್ದಾರೆ. ನೊಂದ ಹೆಣ್ಣು ಮಕ್ಕಳಿಗೆ ನ್ಯಾಯ ಸಿಗಬೇಕು. ತಪ್ಪು ಮಾಡಿದ ಗಂಡು ಮಕ್ಕಳಿಗೆ ಶಿಕ್ಷೆ ಆಗಲೇಬೇಕು. ಆದರೆ ಗಂಡಸರ ಬಗ್ಗೆ ಯಾರೂ ಸುಮ್ಮಸುಮ್ಮನೆ ಆರೋಪ ಮಾಡಬಾರದು ಎಂದು ಮಾನ್ವಿತಾ ಕಾಮತ್ ತಿಳಿಸಿದ್ದಾರೆ.
Comments