ಬಿಗ್ ಬಿ ಅಮಿತಾಬ್’ನನ್ನು ಕಾಡಲಿದೆಯಾ ಮಿ ಟೂ ಆರೋಪ..!?

13 Oct 2018 4:06 PM | Entertainment
470 Report

ಇದೀಗ ದೇಶದೆಲ್ಲೆಡೆ ಮಿಟೂ ಅಭಿಯಾನ ಶುರುವಾಗಿದೆ. ಹೆಣ್ಣು ಮಕ್ಕಳು ತಮಗಾದ ಅನ್ಯಾಯದ ವಿರುದ್ದ ಹಾಗೂ ಲೈಂಗಿಕ ದೌರ್ಜನ್ಯ ವಿರುದ್ಧ ತಿರುಗಿಬಿದ್ದಿದ್ದಾರೆ. ದೇಶದಲ್ಲಿ ಹೊಸ ಸಂಚಲನ ಸೃಷ್ಟಿಸುತ್ತಿರುವ ಮಿ ಟೂ ಅಭಿಯಾನ ಈಗಾಗಲೇ ಅಲೋಕ್ ನಾಥ್, ವಿಕಾಸ್ ಬಾಲ್, ನಾನಾ ಪಾಟೇಕರ್, ಸಾಜಿದ್ ಖಾನ್, ಅನು ಮಲಿಕ್, ಕೈಲಾಶ್ ಖೇರ್ ಸೇರಿದಂತೆ ಸಿನಿಮಾ ಕ್ಷೇತ್ರದ ಘಟಾನುಘಟಿಗಳ ಹೆಸರಿಗೆ ಮಸಿ ಬಳೆದಿದೆ. ಇದೀಗ ಬಿಗ್ ಬಿ ಎಂದೇ ಕರೆಸಿಕೊಳ್ಳುವ ಅಮಿತಾಬ್ ಬಚ್ಚನ್ ಅವರನ್ನು ಕಾಡುವ ಸೂಚನೆಗಳು ಕಾಣಿಸುತ್ತಿವೆ.

ಎಸ್.. ಇದಕ್ಕೆ ಕಾರಣ ಖ್ಯಾತ ಕೇಶ ವಿನ್ಯಾಸಕಿ ಸಪ್ನಾ ಭವ್ನನಿ ಅವರು ಮಾಡಿರುವ ಟ್ವೀಟರ್ ಸಂದೇಶ., ಮಿ ಟೂ ಅಭಿಯಾನಕ್ಕೆ ಅಮಿತಾಬ್ ಬಚ್ಚನ್ ಬೆಂಬಲಿಸಿ ಟ್ವೀಟ್ ಮಾಡಿದ್ದರು. ಈ ಟ್ವೀಟ್ ಗೆ ಪ್ರತಿಕ್ರಿಯೆ ನೀಡಿರುವಂತಹ ಸಪ್ನಾ, 'ಇದು ದೊಡ್ಡ ಸುಳ್ಳು. ಈಗಾಗಲೇ ಪಿಂಕ್ ಸಿನಿಮಾ ಬಿಡುಗಡೆಯಾಯಿತು ಹಾಗೇ ಹೋಯ್ತು. ಮತ್ತು ಸಾಮಾಜಿಕ ಕಳಕಳಿಯ ಹೋರಾಟಗಾರನಾಗಿ ಗುರುತಿಸಿಕೊಂಡಿರುವ ನಿಮ್ಮ ಮುಖವಾಡ  ಅತೀ ಶೀಘ್ರವೇ ಕಳಚಿ ಬೀಳಲಿದೆ. ಅತೀ ಶೀಘ್ರದಲ್ಲಿಯೇ ನಿಮ್ಮ ಕುರಿತ ಸತ್ಯ ಬಹಿರಂಗವಾಗಲಿದೆ' ಎಂದು  ಟ್ವೀಟ್ ನಲ್ಲಿ ತಿಳಿಸಿದ್ದಾರೆ. 'ಬಚ್ಚನ್ ಅವರ ಅಸಭ್ಯ ವರ್ತನೆ ಕುರಿತು ನಾನು ವೈಯಕ್ತಿವಾಗಿ ಹಲವು ವಿಷಯಗಳನ್ನು ಕೇಳಿದ್ದೇನೆ ಕೂಡ. ಹೀಗಾಗಿ ಧೈರ್ಯವಂತ ಮಹಿಳೆಯರು ಹೊರಗೆ ಬಂದು ಸತ್ಯವನ್ನು ಹೇಳಬೇಕು ಎಂದು ಸಪ್ನಾ ಟ್ವಿಟರ್ ನಲ್ಲಿ ತಿಳಿಸಿದ್ದಾರೆ.

Edited By

Manjula M

Reported By

Manjula M

Comments