ನ್ಯಾಚುರಲ್ ಸ್ಟಾರ್ ನಾನಿಗೆ ನಾಯಕಿಯಾಗಲಿದ್ದಾರೆ ಶ್ರದ್ಧಾ ಶ್ರೀನಾಥ್..!?

ಶ್ರದ್ಧಾ ಶ್ರೀನಾಥ್… ಕನ್ನಡದ ಯೂ ಟರ್ನ್ ಮೂಲಕ ಹೆಸರು ಮಾಡಿದ ನಟಿ… ಮೂಗುತಿ ಸುಂದರಿ ಅಂತಾನೇ ಹೆಸರು ಪಡೆದಿರುವ ನಟಿ ಸದ್ಯ ತೆಲುಗಿನಲ್ಲೂ ಬೇಡಿಕೆ ನಟಿಯಾಗಿದ್ದಾರೆ. ಯೂ ಟರ್ನ್ ನಲ್ಲಿ ಅಭಿನಯದ ಮೂಲಕ ಕನ್ನಡದ ಸ್ಟಾರ್ ನಟರ ಮನಗೆದ್ದ ಶ್ರದ್ಧಾ ಸದ್ಯ ತೆಲುಗಿನ ನಾನಿ ಜೊತೆ ಸ್ಕ್ರೀನ್ ಷೇರ್ ಮಾಡುತ್ತಿದ್ದಾರೆ.
ತೆಲುಗಿನ ನ್ಯಾಚುರಲ್ ಸ್ಟಾರ್ ನಾನಿ ಅಭಿನಯದ ಹೊಸ ಚಿತ್ರ ‘ಅರ್ಜುನ್’ಗೆ ಮೂಗುತಿ ಸುಂದರಿ ಶ್ರದ್ಧಾ ಶ್ರೀನಾಥ್ ನಾಯಕಿಯಾಗಿ ಅಭಿನಯಿಸಲಿದ್ದಾರೆ ಎಂಬ ಮಾತುಗಳು ಟಾಲಿವುಡ್’ನಲ್ಲಿ ಕೇಳಿಬರ್ತಿವೆ. ಇನ್ನು ಈ ಚಿತ್ರದ ನಾಯಕ ನಾನಿ ಕ್ರಿಕೆಟ್ ಬ್ಯಾಟ್ಸ್ಮನ್ ಪಾತ್ರದಲ್ಲಿ ಮಿಂಚಲಿದ್ದಾರೆ. ಇದಕ್ಕಾಗಿ ನಾನಿ ಪ್ರತಿನಿತ್ಯ ಕ್ರಿಕೆಟ್ ಅಭ್ಯಾಸ ಮಾಡ್ತಿದ್ದಾರಂತೆ. ಸಿತಾರ ಎಂಟರ್ಟೈನ್ ಮೆಂಟ್ ನಿರ್ಮಾಣದ ಈ ಚಿತ್ರವನ್ನ ಗೌತಮ್ ತಿನ್ನನುರಿ ನಿರ್ದೇಶನ ಮಾಡ್ತಿದ್ದು, ಅನಿರುದ್ಧ್ ರವಿಚಂದರ್ ಸಂಗೀತ ನಿರ್ದೇಶನ ಮಾಡ್ತಿದ್ದಾರೆ.
Comments