ಹೆಚ್ಚು ಖುಷಿ ಪಡಬೇಡಿ..! 'ಪುಟ್ಟಗೌರಿ ಮದುವೆ' ಸದ್ಯಕ್ಕೆ ಇನ್ನೂ ಮುಗಿಯಲ್ವಂತೆ..!!
ಯಾಕೋ ದಿನದಿಂದ ದಿನಕ್ಕೆ ಪುಟ್ಟಗೌರಿ ಮದುವೆ ಧಾರಾವಾಹಿ ಬಗ್ಗೆ ಸಾಕಷ್ಟು ಮಾತುಗಳು ಕೇಳಿಬರುತ್ತಿವೆ. ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರ ಆಗುತ್ತಿರುವ 'ಪುಟ್ಟಗೌರಿ ಮದುವೆ' ಧಾರಾವಾಹಿ ಬಗ್ಗೆ ಇತ್ತೀಚೆಗಂತೂ ಸಖತ್ ಸುದ್ದಿಯಲ್ಲಿದೆ.
'ಪುಟ್ಟಗೌರಿ ಮದುವೆ' ಸೀರಿಯಲ್’ನಿಂದ ನಟಿ ರಂಜನಿ ರಾಘವನ್ ಹೊರ ಬಂದಿದ್ದಾರೆ... ನಟಿ ರಂಜಿನಿ 'ಬಿಗ್ ಬಾಸ್' ಮನೆಗೆ ಎಂಟ್ರಿ ಕೊಡುತ್ತಿದದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ.ಜೊತೆಗೆ ಧಾರವಾಹಿ ಮುಗಿಯಲಿದೆ ಎಂಬ ಮಾತುಗಳು ಕೂಡ ಕೇಳಿ ಬರುತ್ತಿವೆ, ಆದರೆ 'ಪುಟ್ಟಗೌರಿ ಮದುವೆ' ಸೀರಿಯಲ್ ಸದ್ಯಕ್ಕೆ ಮುಗಿಯಲ್ಲ ಅಂತ ಧಾರಾವಾಹಿಯ ನಿರ್ದೇಶಕರೇ ಸ್ಪಷ್ಟ ಪಡಿಸಿದ್ದಾರೆ. 'ಪುಟ್ಟಗೌರಿ ಮದುವೆ' ಸೀರಿಯಲ್ ನಲ್ಲಿ ಸದ್ಯದಲ್ಲೇ ಮಂಗಳ ಗೌರಿ ಎಂಬ ಪಾತ್ರದ ಬರಲಿದೆ. ಪುಟ್ಟಗೌರಿಯ ಪಾತ್ರದಷ್ಟೇ ಮಂಗಳ ಗೌರಿ ಪಾತ್ರಕ್ಕೂ ಹೆಚ್ಚು ಪ್ರಾಮುಖ್ಯತೆ ಇರಲಿದೆ. ಮಂಗಳ ಗೌರಿ ಪಾತ್ರದಿಂದ ಈ ಧಾರಾವಾಹಿಗೆ ಹೊಸ ತಿರುವು ಸಿಗಲಿದೆ ಎಂದು ನಿರ್ದೇಶಕರೆ ತಿಳಿಸಿದ್ದಾರೆ.
Comments