ಶನಿ ಸೀರಿಯಲ್‍ದಿಂದ ಸೂರ್ಯದೇವ ಔಟ್..! ಕಾರಣ ಏನ್ ಗೊತ್ತಾ..!?

ಕಿರುತೆರೆಯಲ್ಲಿ ಸಾಕಷ್ಟು ಹೆಸರು ಪಡೆದಿದ್ದ ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ‘ಶನಿ’ ಧಾರಾವಾಹಿ ತಂಡದಿಂದ ಶಾಕಿಂಗ್ ನ್ಯೂಸ್ ಹೊರಬಂದಿದೆ. ಧಾರಾವಾಹಿಯಿಂದ ಸೂರ್ಯದೇವನನ್ನು ತೆಗೆದುಹಾಕಲಾಗಿದ್ಯಂತೆ. ರಂಜಿತ್ ಕುಮಾರ್ ಧಾರಾವಾಹಿಯಲ್ಲಿ ಸೂರ್ಯದೇವನ ಪಾತ್ರ ಮಾಡುತ್ತಿದ್ದರು. ರಂಜಿತ್ ಅವರ ಸೂರ್ಯನ ಪಾತ್ರ ಕಂಡು ಕರುನಾಡ ಜನತೆ ಅವರನ್ನು ಒಪ್ಪಿಕೊಂಡಿತ್ತು. ಆದರೆ ಈಗ ದಿಡೀರ್ ಅಂತ ಶನಿ ಧಾರಾವಾಹಿಯಿಂದ ರಂಜಿತ್ ಹೊರಬಂದಿದ್ದಾರೆ.
ಶನಿ ಧಾರವಾಹಿಯಿಂದ ರಂಜಿತ್ ಹೊರಬರಲು ಮೂಲ ಕಾರಣ ಸಂಭಾವನೆ ಎಂದು ಹೇಳಲಾಗುತ್ತಿದೆ. ಕಳೆದ ಮೂರು ತಿಂಗಳಿಂದ ಸೂರ್ಯ ದೇವನಿಗೆ ಧಾರವಾಹಿಯಲ್ಲಿ ಸಂಭಾವನೆ ಕೊಟ್ಟಿಲ್ಲ. ಒಪ್ಪಂದದ ಪ್ರಕಾರ ರಂಜಿತ್‍ಗೆ ಬರೋಬ್ಬರಿ 3,60,000 ರೂ. ಸಂಭಾವನೆ ಬರಬೇಕಾಗಿದೆಂತೆ. ರಂಜಿತ್ ಜುಲೈ 28ಕ್ಕೆ ಚಿತ್ರಿಕರಣ ಮುಗಿಸಿಕೊಟ್ಟು ರಜೆ ಇರುವ ಕಾರಣಕ್ಕೆ ಮುಂಬೈನಿಂದ ಬೆಂಗಳೂರಿಗೆ ಬಂದಿದ್ದರು. ಈ ವೇಳೆ ಸೂರ್ಯದೇವನ ಪಾತ್ರಕ್ಕೆ ಮತ್ತೊಬ್ಬರನ್ನು ಕರೆ ತಂದಿದ್ದಾರೆ. ಸುಮಾರು ಮೂರು ತಿಂಗಳಿಗೆ ಆಗುವಷ್ಟು ಎಪಿಸೋಡ್ ಅನ್ನು ಜುಲೈನಲ್ಲೇ ಚಿತ್ರೀಕರಣ ಮಾಡಲಾಗಿದೆ. ಸದ್ಯಕ್ಕೆ ರಂಜಿತ್ ನಿರ್ವಹಿಸಿರುವ ಸೂರ್ಯದೇವನ ಪಾತ್ರವೇ ಧಾರಾವಾಹಿಯಲ್ಲಿ ಮಾತ್ರವೇ ಇದೆಯಂತೆ. ಈಗ ರಂಜಿತ್ ಅವರ ಪಾತ್ರಕ್ಕೆ ಮಧುಸಾಗರ್ ಎಂಟ್ರಿ ಕೊಟ್ಟಿದ್ದು, ಕೆಲ ದಿನಗಳಲ್ಲಿ ಇವರ ಪಾತ್ರ ಇರುವ ದೃಶ್ಯ ಪ್ರಸಾರವಾಗಲಿದೆ. ವೀಕ್ಷಕರು ಇದನ್ನು ಹೇಗೆ ತೆಗೆದುಕೊಳ್ಳುತ್ತಾರೆ ಅನ್ನೋದನ್ನ ಕಾದು ನೋಡಬೇಕಿದೆ.
Comments