ವಿಜಯ್ ದೇವರಕೊಂಡಗೆ ಕೊನೆಗೂ ಸುಂದ್ರಿ ಸಿಕ್ಕಿದ್ಳು..! ಯಾರವಳು..!?

ಇತ್ತಿಚಿಗೆ ಟಾಲಿವುಡ್ ನಲ್ಲಿ ವಿಜಯ್ ದೇವರಕೊಂಡ ಹೆಸರು ಸಿಕ್ಕಾಪಟ್ಟೆ ಸದ್ದು ಮಾಡಿದಲ್ಲದೆ ಸ್ಯಾಂಡಲ್ ವುಡ್ ನಲ್ಲೂ ಕೂಡ ಸದ್ದು ಮಾಡಿತ್ತು..ಟಾಲಿವುಡ್ನಲ್ಲಿ ಭಾರಿ ಸುದ್ದಿ ಮಾಡಿದ ಸಿನಿಮಾ ಗೀತಾ ಗೋವಿಂದಂ ಸಿನಿಮಾದಿಂದ ಸದ್ಯ ವಿಜಯ್ ದೇವರಕೊಂಡ ಕನ್ನಡದ ಹುಡುಗಿ ರಶ್ಮಿಕಾ ಮಂದಣ್ಣ ಜೊತೆ ಗಾಸಿಪ್ಗೆ ಒಳಗಾಗಿದ್ದರು. ನಂತರ ವಿಜಯ್ ಕಣ್ಣು ಮೊದಲು ನಟಿ ದಿ. ಶ್ರೀ ದೇವಿ ಮಗಳ ಮೇಲೆ ಬಿದ್ದಿತ್ತು.
ಆದರೆ ಸದ್ಯ ಮತ್ತೊಬ್ಬ ಹುಡುಗಿ ಮೇಲೆ ವಿಜಯ್ ಕಣ್ಣು ಹಾಕಿದ್ದಾರೆ. ಅಂದಹಾಗೇ ಏನು ವಿಜಯ್ ದೇವರಕೊಂಡ ಯಾವ ಹುಡುಗಿ ಜೊತೆ ಮತ್ತೆ ಗಾಸಿಪ್ಗೆ ಸಿಕ್ಕಿಹಾಕಿಕೊಂಡ್ರಾ ಅಂತಾ ಯೋಚಿಸ್ತಿದ್ದೀರಾ.. ಹಾಗೇನು ಇಲ್ಲ.. ತಮ್ಮ ಹೊಸ ಸಿನಿಮಾಗಾಗಿ ಹಿರೋಯಿನ್ ಹುಡುಕಾಟದಲ್ಲಿದ್ದಾರೆ ಈಗಾಗಲೇ ನೇಮು ಫೇಮು ಗಳಿಸಿಕೊಂಡಿರುವ ಚಾಕೋಲೇಟ್ ಹೀರೋ ವಿಜಯ್ ಜೊತೆ ಯಾವ ಹೀರೋಯಿನ್ಗಳು ನಟಿಸಲು ಒಲ್ಲೆ ಎಂತಾರೆ ಹೇಳಿ. ಅವರ ಜೊತೆ ಸ್ಕ್ರೀನ್ ಶೇರ್ ಮಾಡಿಕೊಳ್ಳಲು ಐಶ್ವರ್ಯ ರಾಜೇಶ್ ಆಯ್ಕೆಯಾಗಿದ್ದಾರೆ. ಮಣಿರತ್ನಂ ನಿರ್ದೇಶನದ ‘ಚೆಕ್ಕ ಚಿವೆಂತಾ ವಾನಮ್’ ಸಿನಿಮಾವು ಐಶ್ವರ್ಯರ ಕೈಲಿದೆ. ಈಗಾಗಲೇ ಧನುಶ್ ಜೊತೆ ನಟಿಸಿರುವ ‘ವಾಡಾಚನ್ನೈ’ ಸಿನಿಮಾ ಕೂಡ ಇದೆ. ಇದರ ಬೆನ್ನಲ್ಲೆ ತೆಲುಗಿಗೆ ಕಾಲಿಟ್ಟಿರುವ ಐಶ್ವರ್ಯ ನಿರ್ದೇಶಕ ಕ್ರಾಂತಿ ಮಾಧವನ್ ಜೊತೆ ಕೆಲಸ ಮಾಡುವ ಒಳ್ಳೆಯ ಅವಕಾಶವನ್ನು ಗಿಟ್ಟಿಸಿಕೊಂಡಿದ್ದಾರೆ. ಅಂತಾರಾಷ್ಟ್ರೀಯ ಸುದ್ದಿವಾಹಿನಿಗೆ ಸಂದರ್ಶನವನ್ನು ಕೂಡ ನೀಡಿದ್ದಾರೆ. ಇನ್ನೂ ಹೆಸರಿಡದ ಈ ಸಿನಿಮಾದಲ್ಲಿ ಅರ್ಜುನ್ ದೇವರಕೊಂಡ ಹೀರೋ ಅನ್ನೋದು ಈಗಾಗಲೇ ಎಲ್ಲೆಡೆ ಹರಿದಾಡ್ತಿರೋ ಸುದ್ದಿಯಾಗಿದೆ.
Comments