ಶುರುವಾಯ್ತು 'ದಿ ವಿಲನ್' ಬುಕ್ಕಿಂಗ್..!ಟಿಕೆಟ್ ಬೆಲೆ ಕೇಳುದ್ರೆ ಶಾಕ್ ಹಾಕ್ತೀರಾ..?
ಸ್ಯಾಂಡಲ್ ವುಡ್’ನ ಬಹುನಿರೀಕ್ಷಿತ ಸಿನಿಮಾವಾದ ಶಿವಣ್ಣ ಹಾಗೂ ಕಿಚ್ಚ ಸುದೀಪ್ ನಟನೆಯ ದಿ ವಿಲನ್ ಸಿನಿಮಾದ ರಿಲೀಸ್ ಗೆ ಈಗಾಗಲೇ ಡೇಟ್ ಫಿಕ್ಸ್ ಆಗಿದ್ದು, ಸಿನಿಮಾದ ಟಿಕೆಟ್ ಬುಕ್ಕಿಂಗ್ ಪ್ರಾರಂಭವಾಗಿದೆ, ಬುಕ್ ಮೈ ಶೋಗೆ ಈಗ ದಿ ವಿಲನ್ ಸೇರ್ಪಡೆಯಾಗಿದೆ..
ದಿ ವಿಲನ್ ಸಿನಿಪ್ರಿಯರಲ್ಲಿ ಸಿಕ್ಕಾಪಟ್ಟೆ ಕ್ಯೂರಿಯಾಸಿಟಿ ಹುಟ್ಟಿಸಿದೆ. ಶಿವರಾಜ್ ಕುಮಾರ್ ಹಾಗೂ ಸುದೀಪ್ ಅಭಿಮಾನಿಗಳು ಈ ಸಿನಿಮಾವನ್ನು ಫಸ್ಟ್ ಡೇ ಫಸ್ಟ್ ಡೇ ಶೋ ಎನ್ನುವ ಆಸೆ ಇಟ್ಟುಕೊಂಡಿದ್ದಾರೆ, ದಿ ವಿಲನ್ ಸಿನಿಮಾದ ಅಡ್ವಾನ್ಸ್ ಬುಕ್ಕಿಂಗ್ ಇಂದಿನಿಂದ ಪ್ರಾರಂಭವಾಗಿದೆ. ಸದ್ಯಕ್ಕೆ ಬೆಂಗಳೂರಿನ ಕೆಲವೊಂದು ಚಿತ್ರಮಂದಿರದಲ್ಲಿ ಮುಂಗಡ ಟಿಕೆಟ್ ನೀಡಲು ಪ್ರಾರಂಭವಾಗಿದೆ. ದಿ ವಿಲನ್ ಟಿಕೆಟ್ ಗೆ ಸಿಕ್ಕಾಪಟ್ಟೆ ಡಿಮ್ಯಾಂಡ್ ಇದ್ದು, ಒಂದು ಟಿಕೆಟ್ ಬೆಲೆ 400 ರೂಪಾಯಿ, 300 ರೂಪಾಯಿ ಆಗಿದೆ. ಕೊಟ್ಟ ದುಡ್ಡಿಗೆ ಮೋಸ ಆಗದೆ ಇದ್ದರೆ ಸಾಕು.
Comments