ಸ್ಯಾಂಡಲ್’ವುಡ್ ಗೂ ಕಾಲಿಟ್ಟ ‘ಮೀ ಟೂ’ ಅಭಿಯಾನ: ಗಾಯಕ ರಘು ದೀಕ್ಷಿತ್ ಮೇಲೂ ಲೈಂಗಿಕ ಕಿರುಕುಳ ಆರೋಪ

ಇದೀಗ ದೇಶಾದ್ಯಂತ ಬಿರುಗಾಳಿ ಎಬ್ಬಿಸಿರುವ 'ಮೀ ಟೂ' ಅಭಿಯಾನವು ಈಗ ಸ್ಯಾಂಡಲ್ ವುಡ್ ಗೂ ಕಾಲಿಟ್ಟಿದೆ. ಖ್ಯಾತ ಗಾಯಕರಾದ ರಘು ದೀಕ್ಷಿತ್ ವಿರುದ್ಧ ಕೂಡ ಲೈಂಗಿಕ ಆರೋಪ ಕೇಳಿ ಬಂದಿದ್ದು ಗಾಯಕ ಚಿನ್ಮಯಿ ಶ್ರೀಪಾದ ಅವರ ಟ್ವಿಟರ್ ಖಾತೆ ಮೂಲಕ ಗಾಯಕ ರಘು ದೀಕ್ಷಿತ್ ಹೆಸರನ್ನು ಬಹಿರಂಗ ಪಡಿಸದ ಮಹಿಳೆಯೊಬ್ಬರು ಲೈಂಗಿಕ ಆರೋಪವನ್ನು ಮಾಡಿದ್ದಾರೆ.
ಇನ್ನು ಹಲವು ವರ್ಷಗಳ ಹಿಂದೆ ತಮ್ಮನ್ನು ಸ್ಟುಡಿಯೋಗೆ ಕರೆಸಿಕೊಂಡು ರಘು ದೀಕ್ಷಿತ್ ಅಸಭ್ಯವಾಗಿ ವರ್ತಿಸಿದರು. ನನ್ನ ಚೆಕ್‌ಗೆ ಸಹಿ ಹಾಕುವಾಗ ಹತ್ತಿರಕ್ಕೆ ಎಳೆದುಕೊಂಡು ಮುತ್ತು ಕೊಡುವಂತೆ ಹೇಳಿದ್ದರು, ಅದಲ್ಲದೇ ನನ್ನನ್ನು ಎತ್ತಿಕೊಳ್ಳಲು ಪ್ರಯತ್ನ ಮಾಡಿದರು.. ಆದರೆ ನಾನು ಅಳುತ್ತಾ ಓಡಿಹೋದೆ. ಅವರ ಪತ್ನಿ ಬಗ್ಗೆಯೂ ರಘು ಕೆಟ್ಟದಾಗಿ ಮಾತನಾಡಿದ್ದರು ಎಂದು ಆರೋಪಿಸಿದ್ದಾರೆ.
Comments