ರಿಷಬ್ ಶೆಟ್ಟಿ ಜೊತೆ ಸಿನಿಮಾ ಮಾಡ್ತಾರಂತೆ ರಾಕಿಂಗ್ ಸ್ಟಾರ್..!

'ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು ಕೊಡುಗೆ ರಾಮಣ್ಣ ರೈ' ಇತ್ತಿಚಿಗೆ ಸ್ಯಾಂಡಲ್ ವುಡ್’ನಲ್ಲಿ ಸಖತ್ ಸದ್ದು ಮಾಡಿದ ಸಿನಿಮಾ.. ಈ ಸಿನಿಮಾ ಕೇವಲ ಸ್ಯಾಂಡಲ್ ವುಡ್ ನಲ್ಲಿ ಮಾತ್ರವಲ್ಲ.. ಬೇರೆ ಬೇರೆ ದೇಶಗಳಲ್ಲೂ ಕೂಡ ಒಳ್ಳೆಯ ಪ್ರದರ್ಶನವನ್ನು ಕಂಡಿತು. ಚಿತ್ರವನ್ನು ನೋಡಿದ ಎಲ್ಲಾ ಸಿನಿ ತಾರೆಯರು ಮೆಚ್ಚುಗೆಯ ಮಾತುಗಳನ್ನು ಆಡುತ್ತಿದ್ದಾರೆ. ಇದರಿಂದ ನಿರ್ದೇಶಕ ರಿಶಬದ ಶೆಟ್ಟಿ ಸಖತ್ ಖುಷಿಯಾಗಿದ್ದಾರೆ.
ಇತ್ತಿಚಿಗೆ ರಾಕಿಂಗ್ ಸ್ಟಾರ್ ಯಶ್ ಈ ಸಿನಿಮಾವನ್ನು ನೋಡಿ ಮುಚ್ಚುಗೆಯ ಮಾತನ್ನು ಹಾಡಿದ್ದಾರೆ. ಅಷ್ಟೆ ಅಲ್ಲದೆ ಸಿನಿಮಾದಲ್ಲಿ ತಮಗೆ ಇಷ್ಟವಾದ ಎಲ್ಲಾ ಅಂಶಗಳನ್ನು ತಿಳಿಸಿದ್ದಾರೆ. ಕಾಸರಗೋಡಿನ ಸಂಸೃತಿ, ಬಾಲ್ಯ ಎಲ್ಲವನ್ನು ತೋರಿಸಿರುವ ರೀತಿ ತುಂಬಾ ಇಷ್ಟ ಅಯ್ತು. ಬಾಲ್ಯದ ದೃಷ್ಟಿಕೋನದಿಂದ ಈ ಸಿನಿಮಾ ತೋರಿಸಿದ್ದಾರೆ. ಸಾಕಷ್ಟು ವಿಷಯಗಳು ಸಿನಿಮಾದಲ್ಲಿ ಇದೆ. ಅನಂತ್ ಸರ್ ಅದ್ಭುತವಾಗಿ ಅಭಿನಯಿಸಿದ್ದಾರೆ. ನಮ್ಮ ಭಾಷೆಯಲ್ಲಿ ಈ ರೀತಿಯ ಸಿನಿಮಾ ಬಂದಿದೆ ಎಂದು ನಾವೆಲ್ಲ ಹೆಮ್ಮೆ ಪಡಬೇಕು ಎಂದು ಯಶ್ ಹೇಳಿದರು. ಅವರ ಚಿತ್ರ ಮಾಡುವ ಅವಕಾಶ ಬಂದರೆ ಖಂಡಿತ ನಾನು ಸಿನಿಮಾವನ್ನು ಮಾಡುತ್ತೇನೆ ಎಂದು ಯಶ್ ತಿಳಿಸಿದ್ದಾರೆ.
Comments