ವಿನಯ್ ರಾಜ್ ಕುಮಾರ್ ಗೆ ಹರಿಪ್ರಿಯಾ ಅಂದ್ರೆ ಸಖತ್ ಇಷ್ಟವಂತೆ..! ಯಾಕೆ ಗೊತ್ತಾ..?
ಡಾ. ರಾಜ್ ಕುಮಾರ್ ಮನೆಯ ಹುಡುಗನಿಗೆ ಹರಿಪ್ರಿಯ ಎಂದರೆ ನನಗೆ ತುಂಬಾ ಇಷ್ಟವಂತೆ. ಅರೇ ಹೌದಾ.. ಯಾರಪ್ಪ ಆ ಹುಡುಗ ಅಂತ ಯೋಚನೆ ಮಾಡುತ್ತಿದ್ದೀರಾ… ಅವರೆ ಕಣ್ರಿ ನಮ್ಮ ರಾಘವೇಂದ್ರ ರಾಜ್ ಕುಮಾರ್ ಅವರ ಮಗ ವಿನಯ್ ರಾಜ್ ಕುಮಾರ್.. ವಿನಯ್’ಗೆ ಹರಿಪ್ರಿಯಾ ಕಂಡರೆ ತುಂಬಾ ಅಂದ್ರೆ ತುಂಬಾ ಇಷ್ಟವಂತೆ..
ಡಾ. ಆಫ್ ಪಾರ್ವತಮ್ಮ ಟೀಸರ್ ಲಾಂಚ್ ಕಾರ್ಯಕ್ರಮದಲ್ಲಿ ನಟ ವಿನಯ್ ರಾಜ್ ಕುಮಾರ್ ಈ ಮಾತನ್ನು ಹೇಳಿದ್ದಾರೆ. ಹರಿಪ್ರಿಯಾ ಎಂದರೆ ನನಗೆ ತುಂಬಾನೇ ಇಷ್ಟ,,ನಾನು ಅವರ ಅಭಿಮಾನಿ ಎಂದು ವಿನಯ್ ರಾಜ್ ಕುಮಾರ್ ತಿಳಿಸಿದ್ದಾರೆ. ಈಗಾಗಲೇ ಸಾಕಷ್ಟು ಸಿನಿಮಾಗಳಿಂದ ತನ್ನ ಬೋಲ್ಡ್ ನಟನೆಯಿಂದ ಅದೆಷ್ಟೋ ಅಭಿಮಾನಿಗಳನ್ನು ನಟಿ ಹರಿಪ್ರಿಯಾ ಗಿಟ್ಟಿಸಿಕೊಂಡಿದ್ದಾರೆ.. ಹರಿಪ್ರಿಯಾ ಡಾ. ಆಫ್ ಪಾರ್ವತಮ್ಮ ಚಿತ್ರದಲ್ಲಿ ನಟಿಸುತ್ತಿದ್ದು. ಸಿನಿಮಾದ ಟೀಸರ್ ರಿಲೀಸ್ ಆಗಿ ಗಮನ ಸೆಳೆಯುತ್ತಿದೆ ಎಂದು ವಿನಯ್ ರಾಜ್ ಕುಮಾರ್ ತಿಳಿಸಿದ್ದಾರೆ.
Comments