‘ಪುಟ್ಟಗೌರಿ ಮದುವೆ’ ಧಾರವಾಹಿ ವೀಕ್ಷಕರಿಗೆ ಶಾಕಿಂಗ್ ನ್ಯೂಸ್: ಧಾರವಾಹಿಯಿಂದ ಹೊರಬಂದ ಗೌರಿ..! ಕಾರಣ ಏನ್ ಗೊತ್ತಾ.?
ಕಿರುತೆರೆಯಲ್ಲಿ ಬರುವ ಧಾರವಾಹಿಗಳು ಮತ್ತು ಅದರ ಪಾತ್ರಗಳು ಜನರ ಮನಸ್ಸನ್ನು ಗೆದ್ದಿವೆ ಅಂದರೆ ನಿಜಕ್ಕೂ ತಪ್ಪಾಗುವುದಿಲ್ಲ. ಇದೀಗ ವೀಕ್ಷಕರಿಗೆ ಒಂದು ಬಿಗ್ ಶಾಕಿಂಗ್ ನ್ಯೂಸ್ ಕಾದಿದೆ. ಪುಟ್ಟಗೌರಿಯ ದರ್ಶನ ಇನ್ನೂ ಸ್ವಲ್ಪ ದಿನವೇ ಅಷ್ಟೆ…ಆಮೇಲೆ ನೀವು ಗೌರಿಯನ್ನು ನೋಡಲು ಸಾಧ್ಯವಿಲ್ಲವಂತೆ.. ನಟಿ ರಂಜಿನಿ ರಾಘವನ್ ಪುಟ್ಟಗೌರಿ ಎಂದೇ ಜನರ ಮನಸ್ಸನ್ನು ಗೆದ್ದಿದ್ದರು. ಆದರೆ ಈಗ ಅವರು ಪುಟ್ಟಗೌರಿ ಧಾರಾವಾಹಿಯಿಂದ ಹೊರಬರುತ್ತಿದ್ದಾರೆ.
ರಂಜಿನಿ ತಮ್ಮ ನಾಲ್ಕುವರೆ ವರ್ಷಗಳ ಸೀರಿಯಲ್ ಜರ್ನಿಗೆ ಪುಲ್ ಸ್ಟಾಫ್ ಇಟ್ಟು ಹೊರ ಬಂದಿದ್ದಾರೆ. ಸದ್ಯ ಈ ತಿಂಗಳ ಕೊನೆಯವರೆಗೆ ಮಾತ್ರ ರಂಜಿನಿ ಪುಟ್ಟಗೌರಿ ಧಾರಾವಾಹಿಯಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಪುಟ್ಟಗೌರಿ ಮದುವೆ ಕಿರುತೆರೆಯಲ್ಲಿ ನಂಬರ್ 1 ಧಾರಾವಾಹಿ ಆಗಿತ್ತು. ರಂಜಿನಿ ಒಂದು ಎಪಿಸೋಡ್‍ಗೆ ಸುಮಾರು 7 ರಿಂದ 8 ಸಾವಿರ ಸಂಭಾವನೆ ಪಡೆಯುತ್ತಿದ್ದರು. ಅಲ್ಲದೇ ಕನ್ನಡ ನಟಿಯರಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ಕನ್ನಡದ ಕಿರುತೆರೆ ನಟಿಯಲ್ಲಿ ಇವರು ಕೂಡ ಒಬ್ಬರಾಗಿದ್ದರು. ಸದ್ಯ ರಂಜಿನಿ ಪುಟ್ಟಗೌರಿ ಧಾರಾವಾಹಿಯಿಂದ ಹೊರಬಂದಿದ್ದು, ಎಲ್ಲರಿಗೂ ಹಲವು ಅನುಮಾನಗಳನ್ನು ಹುಟ್ಟಿಸಿದೆ. ರಂಜಿನಿ ಬಿಗ್ ಬಾಸ್ ಮನೆಗೆ ಹೋಗಲು ಸೀರಿಯಲ್ ಬಿಟ್ಟರಾ ಎಂಬ ಅನುಮಾನ ಶುರುವಾಗಿದೆ. ಇದೇ ಅಕ್ಟೋಬರ್ 21ರಿಂದ ಬಿಗ್ ಬಾಸ್ ರಿಯಾಲಿಟಿ ಶೋ ಶುರುವಾಗುತ್ತಿದೆ. ಬಿಗ್ ಬಾಸ್ ಮನೆಗೆ ಹೋಗುವುದರ ಬಗ್ಗೆ ರಂಜಿನಿ ಗುಟ್ಟು ಮಾಡುತ್ತಿದ್ದಾರಾ ಎಂಬ ಅನುಮಾನಗಳು ಮೂಡುತ್ತಿವೆ. ಏನೇ ಆಗಲಿ ಇಷ್ಟು ದಿನ ಪ್ರೇಕ್ಷಕರನ್ನು ರಂಜಿಸಿದ ಪುಟ್ಟಗೌರಿ ಧಾರವಾಹಿ ಬರುತ್ತಿಲ್ಲ ಅಂದರೆ ಅಭಿಮಾನಿಗಳಿಗೆ ನಿರಾಸೆಯಾಗುವುದಂತೂ ಖಂಡಿತ.
Comments