ನಾಯಕಿಯಾಗಿ ಬೆಳ್ಳಿ ತೆರೆಗೆ ಎಂಟ್ರಿ ಕೊಡಲಿದ್ದಾರೆ ಪ್ರಜ್ವಲ್ ಪತ್ನಿ ರಾಗಿಣಿ ಚಂದ್ರನ್

ನಟನೆಯನ್ನು ಪ್ಯಾಷನ್ ಮಾಡಿಕೊಂಡಿರುವ ಪ್ರಜ್ವಲ್ ದೇವರಾಜ್ ಪತ್ನಿ ರಾಗಿಣಿ ಚಂದ್ರನ್ ನೃತ್ಯಗಾರ್ತಿಯಾಗಿರುವ ವಿಷಯ ಎಲ್ಲರಿಗೂ ತಿಳಿದೆ ಇದೆ. ಇದೀಗ ಪ್ರಜ್ವಲ್ ದೇವರಾಜ್ ಪತ್ನಿ ರಾಗಿಣಿ ಚಂದ್ರನ್ ಪೂರ್ಣ ಪ್ರಮಾಣದ ನಾಯಕಿಯಾಗಿ ತೆರೆ ಮೇಲೆ ಎಂಟ್ರಿ ಕೊಡಲು ಬಣ್ಣ ಹಚ್ಚುತ್ತಿದ್ದಾರೆ.
ಕೆಲವೊಂದು ವಾಣಿಜ್ಯಾತ್ಮಕ ಜಾಹಿರಾತುಗಳಲ್ಲಿ ಕಾಣಿಸಿಕೊಂಡಿದ್ದ ರಾಗಿಣಿ ಚಂದ್ರನ್ ಅವರು , ನಟನೆಗೆ ಪೂರ್ಣ ಅವಧಿ ಮೀಸಲಿಡಲು ಇದೀಗ ನಿರ್ಧಾರ ಮಾಡಿದ್ದಾರಂತೆ. ಕಿರುಚಿತ್ರ ರಿಷಬಪ್ರಿಯದಲ್ಲಿ ನಟಿಸಿದ್ದ ರಾಗಿಣಿ, ವಿಕ್ರಮ್ ಚಿತ್ರದಲ್ಲಿ ಪತಿ ಪ್ರಜ್ವಲ್ ದೇವರಾಜ್ ಜೊತೆಯಲ್ಲಿ ಇನ್ಸ್ ಪೆಕ್ಟರ್ ಪಾತ್ರದಲ್ಲಿ ತೆರೆ ಮೇಲೆ ಕಾಣಿಸಿಕೊಂಡಿದ್ದರು. ಇದೀಗ ನಿರ್ದೇಶಕ ರಘು ಸಮರ್ಥ್ ಅವರ ಮುಂದಿನ ಚಿತ್ರದಲ್ಲಿ ಪೂರ್ಣ ಪ್ರಮಾಣದ ನಾಯಕಿಯಾಗಿ ಅಭಿನಯಿಸುತ್ತಿದ್ದಾರೆ. ಈ ಚಿತ್ರಕ್ಕೆ ವಿಜಯದಶಮಿ ಎಂಬ ಹೆಸರಿಡಲಾಗಿದೆ. ಈ ಶೀರ್ಷಿಕೆಯ ಚಿತ್ರಕ್ಕೆ ಇದೇ ತಿಂಗಳ 19 ರಂದು ಮುಹೂರ್ತ ನಡೆಯಲಿದ್ದು, 21ರ ನಂತರ ಶೂಟಿಂಗ್ ಪ್ರಾರಂಭವಾಗಲಿದೆಯಂತೆ.
Comments