ಸಿನಿಮಾ ಸೆಟ್’ನಲ್ಲಿ ಕಣ್ಣೀರಿಟ್ಟ ರಶ್ಮಿಕಾ ..! ಕಾರಣ ಏನ್ ಗೊತ್ತಾ..?

ಚಂದನವನದ ಚಂದದ ತಾರೆ ರಶ್ಮಿಕಾ ಮಂದಣ್ಣ ತೆಲುಗಿನ ಗೀತಾ ಗೋವಿಂದಂ ಚಿತ್ರದ ಸೆಟ್ ನಲ್ಲಿ ಬಿಕ್ಕಿ ಬಿಕ್ಕಿ ಅತ್ತ ಸುದ್ದಿ ತಡವಾಗಿ ಎಲ್ಲರಿಗೂ ಗೊತ್ತಾಗಿದೆ.. ರಶ್ಮಿಕಾ ಮಂದಣ್ಣ ತೆಲುಗು ಸಿನಿಮಾದ ಶೂಟಿಂಗ್ ನಲ್ಲಿ ಅತ್ತಿರುವ ಸುದ್ದಿ ಬಗ್ಗೆ ಸ್ವತಃ ರಶ್ಮಿಕಾ ಹೇಳಿಕೊಂಡಿದ್ದಾರೆ. ಎಂದಿನಂತೆ ಸಿನಿಮಾ ಸೆಟ್ ಗೆ ಹೋಗಿದ್ದೆ, ಶೂಟಿಂಗ್ ಪ್ರಾರಂಭವಾಗಿ ಒಂದು ವಾರವಷ್ಟೇ ಆಗಿತ್ತು.
ವಧುವಿನ ಕಾಸ್ಟ್ಯೂಮ್ ಹಾಕಿಕೊಳ್ಳಬೇಕಿತ್ತು. ಸೆಟ್’ಗೆ ಹೋದ ತಕ್ಷಣ ಎಲ್ಲರನ್ನೂ ಮಾತನಾಡಿಸಿದಾಗ ಯಾರೂ ನನ್ನೊಂದಿಗೆ ಮಾತನಾಡಲಿಲ್ಲ. ನಾನು ಏನಾದರೂ ತಪ್ಪು ಮಾಡಿದೇನಾ ಅನಿಸಿತು. ಮೇಕಪ್ ಮುಗಿಸಿ ಹೊರ ಬಂದರೂ ಯಾರು ಕೂಡ ನನ್ನ ಜೊತೆ ಮಾತನಾಡಲಿಲ್ಲ. ನಾನು ಡೈರೆಕ್ಟರ್ ಬಳಿ ಹೋಗಿ ಸರ್ ನನಗೆ ಮೂಡ್ ಇಲ್ಲ. ಹೊರಡುತ್ತೇನೆ ಎಂದು ಹೇಳಿದೆ. ಅವರು ಸೀರಿಯಸ್ ಆಗಿ ನನ್ನ ಮುಖವನ್ನು ನೋಡಿದ್ರು. ಆಗ ವಿಜಯ್ ದೇವರಕೊಂಡ ಬಂದು ಇದೆಲ್ಲವೂ ಪ್ಲ್ಯಾನ್ ನಿಮ್ಮನ್ನು ಬಕ್ರ ಮಾಡಲು ನಾವು ಮಾಡಿದ ಉಪಾಯ ಎಂದು ಹೇಳಿದರು. ಆಗ ನನಗೆ ತುಂಬಾ ಅಳು ಬಂದು ಜೋರಾಗಿ ಅತ್ತು ಬಿಟ್ಟೆ ಎಂದು ರಶ್ಮಿಕಾ ಹೇಳಿದ್ದಾರೆ.
Comments