ನಾವಿಬ್ಬರು ಬೇರೆ ಬೇರೆ ಆಗಿದ್ದೂ ನಿಜ : ಸತ್ಯ ಬಾಯಿಬಿಟ್ಟ ರಶ್ಮಿಕಾ ..!!!

ಸ್ಯಾಂಡಲ್ ವುಡ್ನಲ್ಲಿ ಕರ್ಣ ಅಂತಾನೇ ಫೇಮಸ್ ಆಗಿರುವ ರಕ್ಷಿತ್ ಶೆಟ್ಟಿ ಮತ್ತು ರಶ್ಮಿಕಾ ಮಂದಣ್ಣ ನಡುವಿನ ಲವ್ ಬ್ರೇಕ್ ಅಪ್ ವಿಚಾರ ಹಬ್ಬಿದ್ದೇ ತಡ ಇಡೀ ಸ್ಯಾಂಡಲ್ವುಡ್ ಮತ್ತು ಟಾಲಿವುಡ್ ಇವರತ್ತ ಒಂದು ನಿಮಿಷ ತಿರುಗಿ ನೋಡಿತ್ತು. ರಶ್ಮಿಕಾ ಮಂದಣ್ಣ ಆಗಲೀ ರಕ್ಷಿತ್ ಆಗಲೀ ಲವ್ ಬ್ರೇಕ್ಅಪ್ ಬಗ್ಗೆ ಸರಿಯಾಗಿ ಪ್ರತಿಕ್ರಿಯೆ ನೀಡಿರಲಿಲ್ಲ. ಅದರ ಬಗ್ಗೆ ಸ್ಪಷ್ಟವಾಗಿ ಮಾತನಾಡದೇ ಅಡ್ಡಗೋಡೆ ಮೇಲೆ ದೀಪವಿಟ್ಟಂತೇ ಇಬ್ಬರು ಮಾತನಾಡುತ್ತಿದ್ದರು.
ರಶ್ಮಿಕಾ ಮಂದಣ್ಣ ಅವರು ಕಿರಿಕ್ ಪಾರ್ಟಿಯ ನಂತರ ಅದ್ಯಾಕೋ ರಕ್ಷಿತ್-ರಶ್ಮಿಕಾ ಸಂಬಂಧ ಅಷ್ಟಾಗಿ ಚೆನ್ನಾಗಿರಲಿಲ್ಲ ಅನ್ಸುತ್ತೆ . ಆದರೆ ಈ ಬಗ್ಗೆ ಇವರಿಬ್ಬರು ಎಲ್ಲೂ ಕೂಡ ಕಡ್ಡಿ ತುಂಡಾಗಿ ಮಾತನಾಡಿರಲಿಲ್ಲ. ಇವೆಲ್ಲದಕ್ಕೆ ಬ್ರೇಕ್ ಹಾಕಲು ಸದ್ಯ ರಶ್ಮಿಕಾ ಅವರೇ ಮಾತನಾಡಿದ್ದಾರೆ. ಅಂದಹಾಗೇ ತಮ್ಮ ಪ್ರೇಮ್ ಕಹಾನಿ ಬಗ್ಗೆ ರಶ್ಮಿಕಾ ತೆಲಗು ಮಾಧ್ಯಮದವರ ಮುಂದೆ ಮಾತನಾಡಿದ್ದಾರೆ. ಕಿರಿಕ್ ಪಾರ್ಟಿ ಸಿನಿಮಾದ ನಂತರ ರಕ್ಷಿತ್ ಮತ್ತು ರಶ್ಮಿಕಾ ನಡುವೆ ಪ್ರೀತಿ ಮೊಳಕೆಯೊಡೆದಿತ್ತು.. ಮೊದಲ ನೋಟದಲ್ಲೇ ಇಬ್ಬರೂ ಪ್ರೀತಿಯ ಬಲೆಗೆ ಸಿಲುಕಿಕೊಂಡರು.. ರಶ್ಮಿಕಾ ಟಾಲಿವುಡ್ಗೆ ಯಾವಾಗ ಹಾರಿದ್ರೋ ನೋಡಿ ಅಲ್ಲಿಂದ ಆರಂಭವಾಯ್ತು ರಶ್ಮಿಕಾ ರಕ್ಷಿತ್ ಪ್ರೀತಿಗೆ ಕಂಟಕ. ನಮ್ಮ ಪ್ರೀತಿಗೆ ನನ್ನಮ್ಮ ಬಳಿ ಅನುಮತಿ ಇತ್ತು, ಅದು ನಿಶ್ಚಿತಾರ್ಥದ ತನಕವೂ ಹೋಗಿ ಸಂಭ್ರಮದಲ್ಲಿ ಅದು ಕೂಡ ನಡೆಯಿತು. ಆ ನಂತರದಲ್ಲಿ ಇಬ್ಬರ ನಡುವೆ ಅವಾಗವಾಗ ಮನಸ್ತಾಪ ಉಂಟಾಗುತ್ತಿತ್ತು. ಇನ್ನು ನಾವಿಬ್ಬರು ಒಟ್ಟಿಗೆ ಇರೋದು ಬೇಡವೆನಿಸಿತು. ಸಮಸ್ಯೆ ಚಿಕ್ಕಂದಿರುವಾಗಲೇ ಅದನ್ನು ನಿವಾರಿಸೋದು ಒಳ್ಳೇದೂ ಎನಿಸಿತು. ಹಾಗಾಗಿ ನಾವಿಬ್ಬರು ಮದುವೆಯಾಗುವ ಮುನ್ನವೇ ದೂರ ಆಗಿದ್ದೇವೆ. ಇಬ್ಬರು ಸಂಬಂಧವನ್ನು ಮುರಿದುಕೊಂಡಿದ್ದು ನಿಜ. ಸದ್ಯ ಸಿನಿಮಾವನ್ನಷ್ಟೇ ನಾನು ಪ್ರೀತಿಸ್ತೀನಿ ಎಂದು ಕಡ್ಡಿ ತುಂಡಾಗುವಂತೆ ರಶ್ಮಿಕಾ ಕ್ಲ್ಯಾರಿಟಿ ಕೊಟ್ಟಿದ್ದಾರೆ.
Comments