ಯಶ್ ಅಭಿಮಾನಿಗಳಿಗೆ ಬ್ಯಾಡ್ ನ್ಯೂಸ್..! ಕೆಜಿಎಫ್ ರಿಲೀಸ್ ಡೇಟ್ ಬದಲಿಸಿದ ಚಿತ್ರತಂಡ..!!

ಸ್ಯಾಂಡಲ್ ವುಡ್’ನ ಹೈವೋಲ್ಟೇಜ್ ಚಿತ್ರವಾದ ಕೆಜಿಎಫ್ ಚಿತ್ರದ ಅಭಿಮಾನಿಗಳಿಗೆ ಚಿತ್ರತಂಡ ಬ್ಯಾಡ್ ನ್ಯೂಸ್ ನೀಡಿದೆ. ರಾಕಿಂಗ್ ಸ್ಟಾರ್ ಯಶ್ ಅಭಿನಯದ ಕೆಜಿಎಫ್ ಸಿನಿಮಾ ಸೌತ್ ದುನಿಯಾದಲ್ಲಿ ಬಾರಿ ಕುತೂಹಲ ಕೆರಳಿತ್ತು. ಪ್ರಶಾಂತ್ ನೀಲ್ ಆ್ಯಕ್ಷನ್ ಕಟ್ ಹೇಳಿರೋ ಈ ಹೈವೋಲ್ಟೇಜ್ ಆಯಕ್ಷನ್ ಸಿನಿಮಾ ಇದೇ ನವೆಂಬರ್ 16ಕ್ಕೆ ರೀಲಿಸ್ ಆಗಲಿದೆ ಎಂದು ಹೇಳಿದ್ದರು. ಆದರೆ ಇದೀಗ ಚಿತ್ರದ ರಿಲೀಸ್ ಡೇಟ್ ಅನ್ನು ಮುಂದಕ್ಕೆ ಆಗಿದೆ ಚಿತ್ರತಂಡ.
ಅಕ್ಟೋಬರ್ 14ಕ್ಕೆ ಕೆಜಿಎಫ್ ಟ್ರೈಲರ್ ಹಾಗೂ ನವೆಂಬರ್ 16ಕ್ಕೆ ಸಿನಿಮಾ ರಿಲೀಸ್ ಮಾಡೋದಾಗಿ ಚಿತ್ರತಂಡ ಹೇಳಿತ್ತು. ಇದ್ದಕ್ಕಿದ್ದಂತೆ ಟ್ರೈಲರ್ ಮತ್ತು ಸಿನಿಮಾ ರಿಲೀಸ್ ಡೇಟ್ ಪೋಸ್ಟ್ ಪೋನ್ ಆಗಿದೆ ಅನ್ನೋ ಸುದ್ದಿ ಗಾಂಧಿನಗರದಲ್ಲಿ ಹರಿದಾಡ್ತಿದೆ. ಈ ಬಗ್ಗೆ ಚಿತ್ರತಂಡ ಯಾವುದೇ ರೀತಿಯ ಸ್ಪಷ್ಟನೆ ಕೊಟ್ಟಿಲ್ಲ ಹಾಗಾಗಿ ಅಭಿಮಾನಿಗಳು ಸೋಷಿಯಲ್ ಮೀಡಿಯಾದಲ್ಲಿ ಬೇಸರ ವ್ಯಕ್ತಪಡಿಸಿದ್ದಾರೆ. ಕೆಜಿಎಫ್ ಟೀಂ ಸೈಲೆಂಟಾಗಿ ಇರೋದು ನೋಡಿ ಆ ಸುದ್ದಿ ನಿಜ ಅಂತ ಅಭಿಮಾನಿಗಳು ಹಾಗೂ ಗಾಂಧಿನಗರದಲ್ಲಿ ಮಾತನಾಡಿಕೊಳ್ಳುತ್ತಿದ್ದಾರೆ.
Comments