ಕುದುರೆ ಹತ್ತಿ ಸವಾರಿ ಹೊರಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಪುತ್ರ
ಮಕ್ಕಳಿಗೆ ಅಪ್ಪ ಅಮ್ಮನನ್ನು ಕಂಡರೆ ತುಂಬಾ ಪ್ರೀತಿ.. ಮಕ್ಕಳು ಅಪ್ಪ ಅಮ್ಮನ ಹಾದಿಯಲ್ಲಿವೆ ನಡೆಯುತ್ತವೆ. ಸಾಮಾನ್ಯವಾಗಿ ಗಂಡು ಮಕ್ಕಳು ತಮ್ಮ ತಂದೆಯ ಹಾಗೇ ನಡತೆಯನ್ನು ಬೆಳಿಸಿಕೊಳ್ಳುತ್ತಾರೆ ಎನ್ನುತ್ತಾರೆ. ಇದಕ್ಕೆ ಸ್ಯಾಂಡಲ್ ವುಡ್ ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಮಗ ವಿನೀಶ್ ಕೂಡ ಸೇರಿಕೊಂಡಿದ್ದಾರೆ.. ಆತ ಕೂಡ ತನ್ನ ತಂದೆ ದರ್ಶನ್ ಅವರನ್ನೆ ಫಾಲೋ ಮಾಡುತ್ತಿದ್ದಾರೆ.
ದರ್ಶನ್ ಪ್ರಾಣಿಗಳನ್ನು ತುಂಬಾ ಪ್ರೀತಿಸುವ ನಟ, ಈಗಾಗಲೇ ಪ್ರಾಣಿಗಳನ್ನು ದತ್ತು ತೆಗೆದುಕೊಂಡು ಸಾಕುತ್ತಿರುವ ವಿಷಯ ತಿಳಿದೆ ಇದೆ. ಇವರಿಗೆ ಕುದುರೆ ಅಂದರೆ ತುಂಬಾ ಇಷ್ಟ, ಅವರು ಸಾಕಿರುವ ಕುದುರೆ ಮೇಲೆ ಅನೇಕ ಬಾರಿ ಸವಾರಿಯನ್ನು ಮಾಡಿದ್ದಾರೆ. ಅದೇ ರೀತಿ ದರ್ಶನ್ ಅವರ ಮಗ ವಿನೀಶ್ ದರ್ಶನ್ ಗೂ ಕೂಡ ಪ್ರಾಣಿಗಳೆಂದರೆ ತುಂಬಾ ಇಷ್ಟ. ಆದ್ದರಿಂದ ಈತ ಕೂಡ ಕುದುರೆಯೊಂದನ್ನು ಸಾಕುತ್ತಿರುವುದಲ್ಲದೇ ಅದರ ಮೇಲೆ ಸವಾರಿ ಮಾಡುವುದನ್ನು ಕೂಡ ಅಭ್ಯಾಸ ಮಾಡುತ್ತಿದ್ದಾರೆ. ವಿನೀಶ್ ಕುದುರೆ ಸವಾರಿ ಮಾಡುತ್ತಿದ್ದ ಫೋಟೋವನ್ನು ಕ್ಲಿಕ್ಕಿಸಿಕೊಂಡು ಅಭಿಮಾನಿಗಳು ತಮ್ಮ ಟ್ಟಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
Comments