ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ@30: ಹ್ಯಾಪಿ ಬರ್ತಡೇ ಡಿಎಸ್

ಚಂದನವನಕ್ಕೆ ಅದ್ದೂರಿ ಚಿತ್ರದ ಮೂಲಕ ಅದ್ದೂರಿಯಾಗಿ ಎಂಟ್ರಿ ಕೊಟ್ಟ ಆ್ಯಕ್ಷನ್ ಪ್ರಿನ್ಸ್ ಗೆ ಇಂದು ಹುಟ್ಟುಹಬ್ಬದ ಸಂಭ್ರಮ.. ಧ್ರುವ ಇಂದು 30 ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ಮಾಡಿದ ಎಲ್ಲಾ ಸಿನಿಮಾಗಳು ಕೂಡ ಯಶಸ್ಸನ್ನು ತಂದುಕೊಟ್ಟಿವೆ. ಇವರ ಮುಂಬರುವ ಪೊಗರು ಸಿನಿಮಾಗಾಗಿ ಅಭಿಮಾನಿಗಳು ಕಾರುತದಿಂದ ಕಾಯುತ್ತಿದ್ದಾರೆ.
ರಾತ್ರಿಯಿಂದಲೇ ಅಭಿಮಾನಿಗಳು ಧ್ರುವ ಮನೆ ಮುಂದೆ ಜಮಾಯಿಸಿ ನೆಚ್ಚಿನ ನಟನ ಹುಟ್ಟುಹಬ್ಬಕ್ಕೆ ಶುಭ ಕೋರಿದರು. ಇನ್ನೂ ಇಂದು ಹುಟ್ಟುಹಬ್ಬದ ಪ್ರಯುಕ್ತ ಧ್ರುವ ಸರ್ಜಾ ಅಭಿನಯದ ಪೊಗರು ಸಿನಿಮಾದ ಟೀಸರ್ ಬಿಡುಗಡೆಯಾಗಲಿದೆ. ಪೊಗರಿನ ಖದರ್ ನೋಡಲು ಅಭಿಮಾನಿಗಳು ಕ್ಯೂರಾಸಿಟಿಯಿಂದ ಕಾಯುತ್ತಿದ್ದಾರೆ. ಪೊಗರು ತೆರೆ ಮೇಲೆ ಬಂದ ಮೇಲೆ ಅಭಿಮಾನಿಗಳಿಗೆ ಖುಷಿಯಾಗುತ್ತದೆ.
Comments