ಪುನೀತ್ ಹೊಸ ಚಿತ್ರದ ಟೈಟಲ್ ಅನೌನ್ಸ್ ಗೆ ಮೂಹೂರ್ತ ಫಿಕ್ಸ್..!

ಪುನೀತ್ ರಾಜ್ ಕುಮಾರ್ ಸಿನಿಮಾ ಅಂದರೆ ಅಭಿಮಾನಿಗಳಿಗೆ ಒಂಥರಾ ಖುಷಿ.. ಕುಟುಂಬ ಸಮೇತವಾಗಿ ಕೂತು ಸಿನಿಮಾ ನೋಡೋಕೆ ಪುನೀತ್ ಸಿನಿಮಾ ಹೇಳಿ ಮಾಡಿಸಿದ ಹಾಗೆ ಇರುತ್ತದೆ. ರಾಜಕುಮಾರ ಸಿನಿಮಾದ ಬಿಗ್ ಸಕ್ಸಸ್ ನಂತರ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಹಾಗೂ ನಿರ್ದೇಶಕ ಸಂತೋಷ್ ಆನಂದ್ ರಾಮ್ ಅವರು ಮತ್ತೊಂದು ಸಿನಿಮಾ ಮಾಡಲು ಮುಂದಾಗಿದ್ದಾರೆ.
ಪುನೀತ್ ರಾಜ್ ಕುಮಾರ್ ಅವರ ಈ ಸಿನಿಮಾಗೆ ಸೂಕ್ತ ಟೈಟಲ್ ಗೆ ಆನಂದ್ ರಾಮ್ ಸಿಕ್ಕಾಪಟ್ಟೆ ಹುಡುಕಾಟ ನಡೆಸಿದ್ದರು. ಈ ಹಿಂದೆ ಅಣ್ಣಾವ್ರ 205 ನೇ ಸಿನಿಮಾದ ಹೆಸರೇ ಅಪ್ಪು ಚಿತ್ರಕ್ಕೆ ಟೈಟಲ್ ಎನ್ನಲಾಗಿತ್ತು. ಆದರೆ, ಆನಂದ್ ಅವರು ಅದನ್ನು ಅಲ್ಲಗೆಳೆದಿದ್ದರು. ಇದೀಗ ಈ ಚಿತ್ರಕ್ಕೆ ಟೈಟಲ್ ಕೂಡ ಫಿಕ್ಸ್ ಆಗಿದೆ. ಈ ಟೈಟಲ್ ಅನೌನ್ಸ್ ಡೇಟ್ ನ್ನು ಇದೇ 10 ರಂದು ರಿವೀಲ್ ಮಾಡೋದಾಗಿ ಟ್ವೀಟರ್ ನಲ್ಲಿ ಹಂಚಿಕೊಂಡಿದ್ದಾರೆ ಚಿತ್ರದ ನಿರ್ದೇಶಕರಾದ ಸಂತೋಷ್ ಆನಂದ್ ರಾಮ್.
Comments