ಸ್ಯಾಂಡಲ್ ವುಡ್ ಗೆ ಮತ್ತೆ ಕಮ್ ಬ್ಯಾಕ್ ಮಾಡಿದ ಮೋಹಕ ಚೆಲುವೆ ರಮ್ಯ..! ಸಿನಿಮಾ ಯಾವುದು ಗೊತ್ತಾ..?
ಸ್ಯಾಂಡಲ್ ವುಡ್ ನಲ್ಲಿ ಮೋಹಕ ಚೆಲುವೆ ಅಂತಾನೆ ಪೇಮಸ್ ಆಗಿದ್ದ ನಟಿ ರಮ್ಯಾ ರಾಜಕೀಯದ ಕಡೆ ಗಮನ ಕೊಟ್ಟು ಸಿನಿಮಾದಿಂದ ದೂರ ಉಳಿದು ಬಿಟ್ಟಿದ್ದರು. ಆದರೆ ಇದೀಗ ರಮ್ಯ ರೀ-ಎಂಟ್ರಿ ನೀಡಲಿದ್ದಾರೆ ಎನ್ನುವ ಸುದ್ದಿಯೊಂದು ಗಾಂಧಿ ನಗರದಲ್ಲಿ ಹರಿದಾಡುತ್ತಿದೆ. ಆ ಸುದ್ದಿ ಒಂದು ವೇಳೆ ನಿಜ ಆದರೆ ಅಭಿಮಾನಿಗಳಿಗೆ ಸಿಹಿ ಸುದ್ದಿ ಸಿಕ್ಕಿದಂತೆ ಆಗುತ್ತದೆ.
ರಮ್ಯಾ ಮತ್ತೆ ಬರೋಬ್ಬರಿ 12 ವರ್ಷಗಳ ನಂತರ ದರ್ಶನ್’ಗೆ 'ಗಂಡುಗಲಿ ಮದಕರಿ ನಾಯಕ' ಚಿತ್ರದಲ್ಲಿ ನಾಯಕಿಯಾಗಿ ನಟಿಸುತ್ತಿದ್ದಾರೆ ಎಂಬ ಗಾಸಿಪ್ ಇದೀಗ ಎಲ್ಲೆಡೆ ಹರಿದಾಡುತ್ತಿದೆ. ರಾಕ್‍ಲೈನ್ ವೆಂಕಟೇಶ್ ಅವರು ಈಗಾಗಲೇ ಗಂಡುಗಲಿ ಮದಕರಿ ನಾಯಕ ಸಿನಿಮಾ ನಿರ್ಮಾಣದಲ್ಲಿ ತಮ್ಮನ್ನ ತಾವು ತೊಡಗಿಸಿಕೊಂಡಿದ್ದಾರೆ. ನಿರ್ದೇಶಕ ರಾಜೇಂದ್ರಸಿಂಗ್ ಬಾಬು ಅವರು ಈ ಸಿನಿಮಾಕ್ಕೆ ಆಕ್ಷ್ಯನ್ ಕಟ್ ಹೇಳುತ್ತಿದ್ದಾರೆ. ರಮ್ಯ ಮತ್ತೆ ಸ್ಯಾಂಡಲ್ ವುಡ್ ಗೆ ರೀ ಎಂಟ್ರಿ ಕೊಟ್ಟಿದೆ ಆದರೆ ಅಭಿಮಾನಿಗಳು ಫುಲ್ ಖುಷ್ ಆಗೋದರಲ್ಲಿ ನೋ ಡೌಟ್.
Comments