‘ವಿಲನ್’ ಅಬ್ಬರಕ್ಕೆ ಸೆಡ್ಡು ಹೊಡೆದು ನಿಲ್ಲುತ್ತಾ ‘ಟೆರರಿಸ್ಟ್’!

ಸ್ಯಾಂಡಲ್’ವುಡ್ ನ ಬಹು ನಿರೀಕ್ಷಿತ ಚಿತ್ರವಾದ ಸುದೀಪ್ ಮತ್ತು ಶಿವರಾಜ್ ಕುಮಾರ್ ನಟಿಸಿರುವ ಚಿತ್ರವಾದ ಜೋಗಿ ಪ್ರೇಮ್ ನಿರ್ದೇಶನದ ವಿಲನ್ ಸಿನಿಮಾ ವಿಶ್ವಾದ್ಯಂತ ರಿಲೀಸ್ ಆಗಲಿದೆ.ಸಾವಿರಕ್ಕೂ ಹೆಚ್ಚು ಥಿಯೇಟರ್ ಗಳಲ್ಲಿ ಬಿಡುಗಡೆಯಾಗುತ್ತಿರೋ ಈ ಚಿತ್ರದ ಮುಂದೆ ಬರಲಾಗದೆ ಬಹುತೇಕ ಚಿತ್ರಗಳು ಹಿಂದೆ ಸರಿದಿವೆ.ಆದರೆ ರಾಗಿಣಿ ಅಭಿನಯದ ಟೆರರಿಸ್ಟ್ ಚಿತ್ರ ಮಾತ್ರ ರಿಲೀಸ್ ಸಿದ್ದವಾಗಿದೆ.
ರಾಗಿಣಿ ಅಭಿನಯದ ಬಹು ನಿರೀಕ್ಷಿತವಾದ ಚಿತ್ರ ಟೆರರಿಸ್ಟ್. ಪಿಸಿ ಶೇಖರ್ ನಿರ್ದೇಶನದ ಈ ಚಿತ್ರ ಮಹಿಳಾ ಪ್ರಧಾನವಾದ ಚಿತ್ರವಂತೆ. ರೋಚಕ ಕಥಾ ಹಂದರವನ್ನು ಹೊಂದಿರುವ ಈ ಚಿತ್ರವನ್ನು ವಿಲನ್ ಅಬ್ಬರಕ್ಕೆ ಎದುರಾಗಿ ಬಿಡುಗಡೆ ಮಾಡಲು ನಿರ್ದೇಶಕ ಪಿ.ಸಿ. ಶೇಖರ್ ನಿರ್ಧಾರ ಮಾಡಿದ್ದಾರೆ. ವಿಲನ್ ಚಿತ್ರದ ಮುಂದೆ ನಿಲ್ಲಲು ಬಹುತೇಕ ಚಿತ್ರಗಳು ಹಿಂದೇಟು ಹಾಕಿರುವಾಗಲೇ ಟೆರರಿಸ್ಟ್ ಚಿತ್ರವನ್ನು ರಿಲೀಸ್ ಮಾಡಲು ಮುಂದಾಗಿರೋ ಶೇಖರ್ ಸಾಹಸವನ್ನು ಎಲ್ಲರೂ ಮೆಚ್ಚಲೇ ಬೇಕು ಎಂದು ಗಾಂಧಿನಗರದಲ್ಲಿ ಮಾತನಾಡಿಕೊಳ್ಳುತ್ತಿದ್ದಾರಂತೆ.
Comments