ಸುದೀಪ್’ಗಾಗಿ 100 ಕೋಟಿ ರೂ. ವೆಚ್ಚದಲ್ಲಿ ಚಿತ್ರ ನಿರ್ಮಾಣ ಮಾಡ್ತಿದ್ದಾರೆ ಪ್ರಿಯಾ ಸುದೀಪ್..!

ಸಿನಿಮಾವೊಂದಕ್ಕೆ ಸ್ಟಾರ್ ವಾರ್ ಶುರುವಾಗಿದೆ ಎಂಬ ಮಾತುಗಳು ಕೆಲವು ದಿನಗಳಿಂದ ಕೇಳಿ ಬರುತ್ತಿತ್ತು.. ದಚ್ಚು ಮತ್ತು ಕಿಚ್ಚನ ನಡುವೆ ಮದಕರಿ ನಾಯಕ ಯಾರು ಎಂಬ ವಿಷಯಕ್ಕಾಗಿ ಚರ್ಚೆಗಳು ನಡೆಯುತ್ತಿದ್ದವು. ಇದೀಗ ಆ ಗೊಂದಲಕ್ಕೆಲ್ಲಾ ತೆರೆ ಎಳೆದಂತಾಗಿದೆ..ಅಷ್ಟೆ ಸುದೀಪ್ ಪತ್ನಿ ಪ್ರಿಯಾ ತನ್ನ ಪತಿಗಾಗಿ 100 ಕೋಟಿ ರೂ ಬಜೆಟ್ ನಲ್ಲಿ ಸಿನಿಮಾ ನಿರ್ಮಾಣ ಮಾಡಲು ಮುಂದಾಗಿದ್ದಾರೆ ಎಂಬ ಮಾತುಗಳು ಗಾಂಧಿನಗರದಲ್ಲಿ ಕೇಳಿಬರುತ್ತಿದೆ.
2009ರಲ್ಲಿ ವೀರ ಮದಕರಿ ಸಿನಿಮಾದಲ್ಲಿ ಅಭಿನಯಿಸಿದ ಸುದೀಪ್ ಅವರಿಗೆ ವಾಲ್ಮೀಕಿ ಟ್ರಸ್ಟ್ ಕಡೆಯವರು ಚಿತ್ರದುರ್ಗದ ಪಾಳೇಗಾರನ ಬಗ್ಗೆ ಸಿನಿಮಾ ಮಾಡುವಂತೆ ಮನವಿಯನ್ನು ಮಾಡಿಕೊಂಡಿದ್ದರಂತೆ.. ಹಾಗಾಗಿ ಕಳೆದ ಕೆಲ ವರ್ಷದಿಂದ ಸುದೀಪ್ ಈ ಬಗ್ಗೆ ನಿರಂತರವಾಗಿ ಚರ್ಚೆ ಮಾಡುತ್ತಿದ್ದರು ಎಂಬ ಮಾಹಿತಿ ತಿಳಿದುಬಂದಿದೆ. ಸುದೀಪ್ ಅಭಿನಯದ ಮದಕರಿ ಚಿತ್ರಕ್ಕೆ `ದುರ್ಗದ ಹುಲಿ’ ಅಥವಾ `ನಾಯಕ’ ಹೆಸರನ್ನು ಇಡಲು ಈಗಾಗಲೇ ಚರ್ಚೆ ನಡೆದಿದ್ದು,`ದುರ್ಗದ ಹುಲಿ’ ಟೈಟಲ್ ಅಂತಿಮಗೊಳ್ಳುವ ಸಾಧ್ಯತೆಯಿದೆ ಎನ್ನಲಾಗಿದೆ. ಕೆಲ ದಿನಗಳಿಂದ ಈ ಚಿತ್ರದ ಕೆಲಸ ಆರಂಭಗೊಂಡಿದ್ದು, ವಿಶೇಷವಾಗಿ ಸುದೀಪ್ ಅವರೇ ಚಿತ್ರದ ನಿರ್ದೇಶನ ಮಾಡುತ್ತಿದ್ದಾರೆ ಎಂದು ಕೂಡ ಹೇಳಲಾಗುತ್ತಿದೆ. ಒಟ್ಟಾರೆ ಅಂದುಕೊಂಡಂತೆ ಆದರೆ ಮತ್ತೊಂದು ಐತಿಹಾಸಿಕ ಸಿನಿಮಾ ನಿರ್ಮಾಣವಾಗುವುದರಲ್ಲಿ ನೋ ಡೌಟ್..
Comments