ಸಂಭಾವನೆ ಹೆಚ್ಚಿಸಿಕೊಂಡ ‘ಅಯೋಗ್ಯ’ ನಾಯಕ..! ಎಷ್ಟು ಗೊತ್ತಾ?

ಒಂದು ಸಿನಿಮಾ ಹಿಟ್ ಆಗುತ್ತಿದ್ದಂತೆ ನಟ ನಟಿಯರು ತಮ್ಮ ತಮ್ಮ ಸಂಭಾವನೆಯನ್ನು ಹೆಚ್ಚು ಮಾಡಿಕೊಂಡು ಬಿಡುತ್ತಾರೆ. ಈಗ ಅದೇ ಸಾಲಿಗೆ ಸ್ಯಾಂಡಲ್ ವುಡ್ ನ ನಟ ನೀನಾಸಂ ಸತೀಶ್ ಕೂಡ ಸೇರಿಕೊಂಡಿದ್ದಾರೆ. ಇದೀಗ ತಮ್ಮ ಸಿನಿಮಾ ಸಂಭಾವನೆಯನ್ನ ದುಪ್ಪಟ್ಟು ಮಾಡಿದ್ದಾರೆ ಅನ್ನೋ ಸುದ್ದಿ ಎಲ್ಲೆಡೆ ಹರಿದಾಡುತ್ತಿದೆ.
ಕನ್ನಡ ಚಿತ್ರರಂಗಕ್ಕೆ ಹಾಸ್ಯನಟನಾಗಿ ಎಂಟ್ರಿ ಕೊಟ್ಟ ನಟ ನೀನಾಸಂ ಸತೀಶ್ ತನ್ನ ಸ್ವಂತ ಪ್ರತಿಭೆಯ ಮೂಲಕ ಸ್ಯಾಂಡಲ್ ವುಡ್ ನ ಸ್ಟಾರ್ ನಟ ಎನಿಸಿಕೊಂಡಿದ್ದಾರೆ. ಇವರು ನಟಿಸಿದ ಕನ್ನಡ ಸಿನಿಮಾಗಳು ಸೂಪರ್ ಹಿಟ್ ಆಗಿದೆ. ಅದರಲ್ಲು ಅಯೋಗ್ಯ ಸಿನಿಮಾದ ಮೂಲಕ ತನ್ನ ವೃತ್ತಿ ಬದುಕಿನಲ್ಲೇ ಕಾಣದ ದೊಡ್ಡ ಯಶಸ್ಸು ಕಂಡಿದ್ದಾರೆ. ಹಾಗಾಗಿ ನಿರ್ಮಾಪಕರು ನೀನಾಸಂ ಕಾಲ್ ಶೀಟ್ ಗಾಗಿ ಕಾಯುತ್ತಿದ್ದಾರಂತೆ. ಆದಕಾರಣ ಇದೀಗ ನಟ ನೀನಾಸಂ ಸತೀಶ್ ತಮ್ಮ ಸಂಭಾವನೆಯನ್ನ ದುಪ್ಪಟ್ಟು ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ. ಅಯೋಗ್ಯ ಚಿತ್ರಕ್ಕೂ ಮುನ್ನ ನೀನಾಸಂ ಸಂಭಾವನೆಯು ಒಂದು ಕೋಟಿಗಿಂತ ಕಡಿಮೆ ಇತ್ತಂತೆ. ಆದರೆ ಈಗ ಇದು ಹೆಚ್ಚಾಗಿದ್ದು ಒಂದೊಂದು ಸಿನಿಮಾಗೆ ಎರಡು ಕೋಟಿ ಕೇಳುತ್ತಿದ್ದಾರೆ ಅನ್ನೋ ಮಾತು ಕೇಳಿ ಬರುತ್ತಿದೆ.
Comments