ರಕ್ಷಿತ್-ರಶ್ಮಿಕಾ ಬ್ರೇಕಪ್ ಬಗ್ಗೆ ಕೊನೆಗೂ ಮೌನ ಮುರಿದ ವಿಜಯ್ ದೇವರಕೊಂಡ ..!

04 Oct 2018 12:30 PM | Entertainment
2597 Report

ಸ್ಯಾಂಡಲ್ ವುಡ್ ನ ಕ್ಯೂಟ್ ಕಪಲ್ ಆಗಲು ಸಿದ್ದವಾಗಿದ್ದ ಕಿರಿಕ್ ಪಾರ್ಟಿಯ ಕರ್ಣ  ಹಾಗೂ ಕರ್ನಾಟಕದ ಕ್ರಶ್ ರಶ್ಮಿಕಾ ಇದೀಗ ದೂರ ದೂರ ಆಗಿದ್ದಾರೆ. ರಕ್ಷಿತ್ ಶೆಟ್ಟಿ ಹಾಗೂ ರಶ್ಮಿಕಾ ಮಂದಣ್ಣ ಅವರ ನಿಶ್ಚಿತಾರ್ಥ ಮುರಿದು ಬಿದ್ದಿರುವ ಬಗ್ಗೆ ವಿಜಯ ದೇವರ ಕೊಂಡ ಪ್ರತಿಕ್ರಿಯಿಸಿದ್ದಾರೆ. ರಶ್ಮಿಕ ಹಾಗೂ ವಿಜಯ್ ನಟಿಸಿದ ಗೀತಾ ಗೋವಿಂದಂ ಸಿನಿಮಾವು ಇಬದಬರಿಗೂ ಕೂಡ ಸಾಕಷ್ಟು ಹೆಸರು ತಂದುಕೊಟ್ಟಿತ್ತು. ಈ ಸಿನಿಮಾವನ್ನು ನೋಡಿ ಕೆಲವರು ಹೊಗಳಿದರೆ ಮತ್ತೆ ಕೆಲವರು ರಶ್ಮಿಕಾಗೆ ಈ ಸಿನಿಮಾ ಬೇಕಿತ್ತಾ ಎನ್ನುವ ರೀತಿ ಮಾತಾನಾಡಿದರು.

ವಿಜಯ್ ತಮ್ಮ ಮುಂದಿನ ಚಿತ್ರ 'ನೋಟಾ' ಪ್ರಚಾರಕ್ಕಾಗಿ ಬೆಂಗಳೂರಿಗೆ ಬಂದಿದ್ದ ಸಮಯದಲ್ಲಿ ಮಾಧ್ಯಮ ಪ್ರತಿನಿಧಿಗಳು ಅವರಿಗೆ ರಕ್ಷಿತ್ ಶೆಟ್ಟಿ ಮತ್ತು ರಶ್ಮಿಕಾ ಮಂದಣ್ಣ ಬ್ರೇಕಪ್ ಸುದ್ದಿ ವಿಷಯವಾಗಿ ಪ್ರಶ್ನೆ ಮಾಡಿದರು. ಆ ಪ್ರಶ್ನೆಗೆ ಉತ್ತರ ನೀಡಿದ ವಿಜಯ್  “ ಈ ವಿಷಯದ ಬಗ್ಗೆ ನಾನೇಕೆ ಪ್ರತಿಕ್ರಿಯಿಸಬೇಕು, ಬೇರೊಬ್ಬರ ವಿಚಾರ ನಮಗೆ ಏಕೆ ಬೇಕು.. ವೈಯಕ್ತಿಕ ವಿಚಾರಗಳನ್ನು ಮನರಂಜನೆಗಳಿಗಾಗಿ ಬಳಸಿಕೊಳ್ಳುವುದು ತಪ್ಪು ಎಂದಿದ್ದಾರೆ. ಅವರ ಜೊತೆ ನಟಿಸಿರುವುದು ನನಗೆ ಖುಷಿ ತಂದಿದೆ.. ಮುಂದಿನ ದಿನಗಳಲ್ಲೂ ಕೂಡ  ಅವರ ಜೊತೆ ಅಭಿನಯಿಸಿದರೂ ನನ್ನ ಅಭಿಪ್ರಾಯ ಬದಲಾಗುವುದಿಲ್ಲ ಎಂದಿದ್ದಾರೆ. ರಕ್ಷಿತ್ ಹಾಗೂ ರಶ್ಮಿಕಾ ಅವರನ್ನು ತಮ್ಮಷ್ಟಕ್ಕೆ ಇರಲು ಬಿಟ್ಟು ಬಿಡಿ ಎಂದು ಮನವಿಯನ್ನು ಕೂಡ ಮಾಡಿಕೊಂಡಿದ್ದಾರೆ. ವೈಯಕ್ತಿಕ ವಿಷಯಗಳನ್ನು ಸರಿದೂಗಿಸಿಕೊಳ್ಳಲು ಅವರಿಗೆ ಕಾಲಾವಕಾಶ ಕೊಡಬೇಕು ಎಂದಿದ್ದಾರೆ.  ರಕ್ಷಿತ್ ಅವರ `ಅವನೇ ಶ್ರೀಮನ್ನಾರಾಯಣ’ ಸಿನಿಮಾ ಕುರಿತು ಮಾತನಾಡಿದ ವಿಜಯ್, ರಕ್ಷಿತ್ ಕೆಲಸವನ್ನು ಅನ್ನು ನಾನು ಬಹಳ ಇಷ್ಟಪಡುತ್ತೇನೆ. ಅಲ್ಲದೇ ರಶ್ಮಿಕಾ ಹಾಗೂ ರಕ್ಷಿತ್ ಇಬ್ಬರಿಗೂ ನಾನು ತುಂಬಾ ಗೌರವ ನೀಡುತ್ತೇನೆ ಎಂದು ತಿಳಿಸಿದರು.

Edited By

Manjula M

Reported By

Manjula M

Comments