ಚಂದನವನದ ಡಿಂಪಲ್ ಕ್ವೀನ್’ನ ನಿಜವಾದ ಹೆಸರೇನು ಗೊತ್ತಾ?

ಚಂದನವನದ ಡಿಂಪಲ್ ಕ್ವೀನ್ ನೆನ್ನೆ ಅಷ್ಟೆ ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾರೆ . ಈ ವೇಳೆ ನಟಿ ರಚಿತಾ ರಾಮ್ ಬಗ್ಗೆ ಒಂದು ಇಂಟ್ರೆಸ್ಟಿಂಗ್ ವಿಷಯ ತಿಳಿದುಬಂದಿದೆ. ಬುಲ್ ಬುಲ್ ಸಿನಿಮಾದಿಂದ ಅಯೋಗ್ಯ ಸಿನಿಮಾದವರೆಗೂ ಕೂಡ ಎಲ್ಲಾ ಸಿನಿಮಾಗಳು ಸೂಪರ್ ಹಿಟ್ ಸಿನಿಮಾಗಳೇ ಆಗಿವೆ..ಸಿನಿಮಾ ಇಂಡಸ್ಟ್ರಿಗೆ ಬಂದ ಮೇಲೆ ಎಲ್ಲರೂ ಹೆಸರನ್ನು ಬದಲಾಯಿಸಿಕೊಳ್ಳುತ್ತಾರೆ. ಅದೇ ರೀತಿ ರಚಿತಾ ರಾಮ್ ಕೂಡ ತಮ್ಮ ಹೆಸರನ್ನು ಬದಲಾಯಿಸಿಕೊಂಡಿದ್ದಾರೆ. ಅಷ್ಟಕ್ಕೂ ಅವರ ನಿಜವಾದ ಹೆಸರೇನು ಗೊತ್ತಾ..?
ಇಷ್ಟೊಂದು ಹೆಸರು ಮಾಡಿರುವ ರಚಿತಾ ರಾಮ್ ಹೆಸರು ರಚಿತ ರಾಮ್ ಅಲ್ಲವಂತೆ ಇವರ ಮೊದಲ ಹೆಸರು ಬಿಂದ್ಯಾ ರಾಮ್ ಅಂತೆ. 'ಬುಲ್ ಬುಲ್' ಸಿನಿಮಾ ಮಾಡುವ ಸಮಯದಲ್ಲಿ ಅವರ ಹೆಸರು ಬಿಂದ್ಯಾಯಿಂದ ರಚಿತಾ ರಾಮ್ ಆಗಿ ಬದಲಾಯಿತಂತೆ. ಬಿಂದ್ಯಾ ಎಂಬ ಹೆಸರು ಉತ್ತರ ಭಾರತದ ಶೈಲಿಯಲ್ಲಿ ಇದೇ ಎನ್ನುವ ಕಾರಣಕ್ಕೆ ಆ ಹೆಸರನ್ನು ಅವರು ಬದಲಾಯಿಸಿಕೊಂಡರಂತೆ. ವಿಶೇಷ ಅಂದರೆ, ರಚಿತಾ ರಾಮ್ ಎಂಬ ಹೆಸರನ್ನು ಸೂಚಿಸಿದ್ದು, ನಿರ್ದೇಶಕ ದಿನಕರ್ ತೂಗುದೀಪ ಹಾಗೂ ಗೀತರಚನೆಕಾರ ಕವಿರಾಜ್. ಏನೇ ಆಗಲಿ ಬಿಂದ್ಯಾ ರಚಿತಾ ರಾಮ್ ಕೊಟ್ಟ ಸಿನಿಮಾಗಳೆ ಸೂಪರ್ ಹಿಟ್ ಸಿನಿಮಾಗಳೇ ಎನ್ನಬಹುದು.
Comments