ದುನಿಯಾ ವಿಜಯ್ ಎದುರಾಯ್ತು ಮತ್ತೊಂದು ಸಂಕಷ್ಟ: ಮತ್ತೆ ಜೈಲಿಗೆ ಹೋಗೋ ಭಯದಲ್ಲಿ ವಿಜಿ..!!

ಕೆಲ ದಿನಗಳಿಂದ ಜೈಲಿನಲ್ಲಿದ್ದ ವಿಜಯ್’ಗೆ ಬೇಲ್ ಸಿಕ್ಕಿದ್ದ ಮೇಲೆ ಸ್ವಲ್ಪ ಆರಾಮಗಿದ್ದರು. ಆದರೆ ಈಗೆ ಮತ್ತೊಂದು ಸಂಕಷ್ಟ ಎದುರಾಗಿದೆ.. ತನ್ನ ಇಬ್ಬರು ಹೆಣ್ಣು ಮಕ್ಕಳ ಭಯ ವಿಜಯ್ ಅವರನ್ನು ಕಾಡುತ್ತಿದೆ ಎನ್ನಲಾಗುತ್ತಿದೆ. ವಿಜಿ ಮಂಗಳವಾರ ಮಧ್ಯಾಹ್ನ ಗಿರಿ ನಗರ ಪೊಲೀಸ್ ಠಾಣೆಗೆ ಹೋಗಿ ಪೊಲೀಸರ ಮುಂದೆ ತಮ್ಮ ಅಳಲು ತೋಡಿಕೊಂಡಿದ್ದಾರೆ. ನನ್ನ ಇಬ್ಬರು ಹೆಣ್ಣು ಮಕ್ಕಳು ನನ್ನ ವಿರುದ್ಧ ತಿರುಗಿ ಬಿದ್ದಿದ್ದಾರೆ ಎಂದು ಪೊಲೀಸರಿಗೆ ದುನಿಯಾ ವಿಜಯ್ ತಿಳಿಸಿದ್ದಾರೆ.
ಇಬ್ಬರು ಹೆಣ್ಣು ಮಕ್ಕಳು ನನ್ನ ವಿರುದ್ಧ ತಿರುಗಿ ಬಿದ್ದಿದ್ದಾರೆ. ಅವರಿಬ್ಬರು ತನ್ನ ತಾಯಿಯ ಮಾತು ಕೇಳಿಕೊಂಡು ನನ್ನ ವಿರುದ್ಧ ದೂರು ನೀಡುವ ಎಲ್ಲಾ ಸಾಧ್ಯತೆಗಳಿವೆ. ಹಾಗಾಗಿ ನನ್ನ ವಿರುದ್ಧ ಯಾವುದಾದರೂ ದೂರು ಬಂದರೆ ಪರಿಶೀಲಿಸಿ ನನ್ನ ಗಮನಕ್ಕೆ ತನ್ನಿ ಎಂದು ಪೊಲೀಸರಿಗೆ ದುನಿಯಾ ವಿಜಿ ಮನವಿಯನ್ನು ಮಾಡಿಕೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ. ಆದರೆ ಈಗ ವಿಜಿ ವಿರುದ್ಧ ಅವರ ಇಬ್ಬರು ಹೆಣ್ಣು ಮಕ್ಕಳು ಸಿಡಿದೆದ್ದಿದ್ದಾರೆ ಎನ್ನಲಾಗಿದೆ.
Comments