ಕಿಡಿಗೇಡಿಗಳಿಂದ ಬಾಂಬ್ ಬೆದರಿಕೆ:ಖ್ಯಾತ ನಿರ್ದೇಶಕ ಮಣಿರತ್ನಂ ನಿವಾಸಕ್ಕೆ ಬಿಗಿ ಪೊಲೀಸ್ ಭದ್ರತೆ

ಗುಳಿ ಕೆನ್ನೆಯ ಸದಾ ಹಸನ್ಮುಖಿ ಆಗಿರುವ ನಟಿ ಎಂದರೆ ಅದು ಸುಹಾಸಿನಿ… ಹೆಸರಿಗೆ ತಕ್ಕೆ ಹಾಗೆ ಆಕೆ ಯಾವಾಗಲೂ ನಗುನಗುತ್ತಾ ಇದ್ದರು, ಅವರ ಪತಿಯಾದ ದಕ್ಷಿಣ ಭಾರತದ ಖ್ಯಾತ ನಿರ್ದೇಶಕ ಮಣಿರತ್ನಂ ಅವರು ಜೀವ ಬೆದರಿಗೆ ಕರೆ ಬಂದಿದೆ. ಇದೀಗ ಅವರ ಪತಿ ದಕ್ಷಿಣ ಭಾರತದ ಖ್ಯಾತ ನಿರ್ದೇಶಕ ಮಣಿರತ್ನಂ ಅವರ ನಿವಾಸಕ್ಕೆ ಬಿಗಿ ಪೊಲೀಸ್ ಭದ್ರತೆ ಒದಗಿಸಲಾಗಿದೆಯಂತೆ.
ನಿರ್ದೇಶಕ ಮಣಿರತ್ನಂ ಅವರಿಗೆ ಕಿಡಿಗೇಡಿಗಳು ಬಾಂಬ್ ಬೆದರಿಕೆ ಹಾಕಿದ್ದಾರಂತೆ. ಈ ಹಿನ್ನೆಲೆಯಲ್ಲಿ ಚೆನ್ನೈನ ಅಭಿರಾಮಪುರದಲ್ಲಿರುವ ಮಣಿರತ್ನಂ ಅವರ ನಿವಾಸಕ್ಕೆ ಪೊಲೀಸರು ದೌಡಾಯಿಸಿದ್ದು, ಮನೆಯನ್ನು ಪರಿಶೀಲನೆ ಮಾಡಿ ಹೆಚ್ಚಿನ ಭದ್ರತೆ ನೀಡಿದ್ದಾರೆ ಎಂದು ಹೇಳಲಾಗುತ್ತಿದೆ. ಮಣಿರತ್ನಂ ಅವರ 'ಚೆಕ್ಕ ಚೀವಂತ ವಾನಂ' ಚಿತ್ರದಲ್ಲಿ ವಿವಾದಾತ್ಮಕ ಸಂಭಾಷಣೆಯೊಂದು ಇದ್ದು ಅದೇ ಕಾರಣಕ್ಕಾಗಿ ಕಿಡಿಗೇಡಿಗಳು ಬಾಂಬ್ ಬೆದರಿಕೆ ಹಾಕಿದ್ದಾರೆ ಎಂದು ಹೇಳಲಾಗುತ್ತಿದೆ.
Comments