ಚಾಲೆಂಜಿಂಗ್ ಸ್ಟಾರ್ ಅಭಿಮಾನಿಗಳಿಗೆ ಗುಡ್ ನ್ಯೂಸ್: ಕಾರ್ ರ್ಯಾಲಿಗೆ ದರ್ಶನ್'ಗೆ ಸಿಕ್ತು ಲೈಸೆನ್ಸ್

ಕೆಲ ದಿನಗಳ ಹಿಂದೆ ಮೈಸೂರಿನಲ್ಲಿ ನಡೆದಂತಹ ರಸ್ತೆ ಅಪಘಾತದಲ್ಲಿ ದರ್ಶನ್ ಅವರ ಬಲಗೈ ಪೆಟ್ಟಾಗಿ ವೈದ್ಯರು ವಿಶ್ರಾಂತಿ ತೆಗೆದುಕೊಳ್ಳುವಂತೆ ಸೂಚನೆಯನ್ನು ನೀಡಿರುವುದು ಎಲ್ಲರಿಗೂ ಕೂಡ ತಿಳಿದೆ ಇದೆ. ಇದೆಲ್ಲದರ ನಡುವೆ ದಸರಾ ಉದ್ಘಾಟನೆಗೆ ಇನ್ನು ಎಂಟು ದಿನಗಳು ಬಾಕಿ ಇದ್ದು, ದಸರಾ ಉದ್ಘಾಟನೆಯ ನಂತರ ಒಂಭತ್ತು ದಿನಗಳು ನಡೆಯುವ ಕಾರ್ಯಕ್ರಮದಲ್ಲಿ ಕಾರ್ ರ‍್ಯಾಲಿಗೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಲೈಸನ್ಸ್ ಸಿಕ್ಕಿದೆ. ಇದರಿಂದ ಅಭಿಮಾನಿಗಳು ಸಿಕ್ಕಾಪಟ್ಟೆ ಖುಷಿಯಾಗಿದ್ದಾರೆ.
ಎಸ್.. ಚಾಲೆಂಜಿಂಗ್ ಸ್ಟಾರ್ ದರ್ಶನ್ ಗೆ ಕಾರು ಓಡಿಸುವ ಕ್ರೇಜ್ ಮೊದಲಿಂದನಲೂ ಕೂಡ ಇದೆ, ಅದರಲ್ಲೂ ಕೂಡ ಅವರು ಕಾರ್ ರ‍್ಯಾಲಿಯಲ್ಲಿ ಭಾಗವಹಿಸುತ್ತಾರೆ ಎನ್ನುತ್ತಾರೆ ಕೆಲವರು. ಇದೆಲ್ಲದರ ನಡುವೆ ಅವರು ದಸರ ಕಾರ್ ರ‍್ಯಾಲಿಗೆ ಚಾಲೆಂಜಿಂಗ್ ಸ್ಟಾರ್ ಅವರು ದರ್ಶನ್ ಭಾಗವಹಿಸಬೇಕಾಗಿತ್ತು, ಆದರೆ ಅಪಘಾತದಿಂದ ಅವರ ಕೈಗೆ ಪೆಟ್ಟಾಗಿದ್ದು, ಅವರು ರ್ಯಾಲಿಯಲ್ಲಿ ಭಾಗವಹಿಸುತ್ತಾರ ಅಂತ ಅಭಿಮಾನಿಗಳಲ್ಲಿ ಅನುಮಾನ ಮೂಡಿದೆ..ಒಂದು ವೇಳೆ ಭಾಗವಹಿಸಿದರೆ ನಿಜವಾಗಲೂ ಅಭಿಮಾನಿಗಳಿಗೆ ಖುಷಿಯಾಗುತ್ತದೆ. ಆದರೆ ವೈದ್ಯರು ದರ್ಶನ್ ಅವರಿಗೆ ಯಾವ ರೀತಿಯ ಸಲಹೆ ಕೊಡ್ತಾರೆ ಅನ್ನೋದನ್ನ ಕಾದು ನೋಡಬೇಕಿದೆ.
Comments