ನಟ ವಿಜಯ್ ಅಂಡ್ ಟೀಮ್ ಗೆ ಬಿಗ್ ರಿಲೀಫ್: ಷರತ್ತು ಬದ್ಧ ಜಾಮೀನು ಮಂಜೂರು

ನಟ ದುನಿಯಾ ವಿಜಯ್ ಜಿಮ್ ಟ್ರೈನರ್ ಮಾರುತಿ ಗೌಡನ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜೈಲು ಸೇರಿರುವ ವಿಷಯವಾಗಿ ಅವರಿಗೆ ಇಂದು ಜಾಮೀನು ಅರ್ಜಿ ತೀರ್ಪು ಅನ್ನು 8 ನೇ ಎಸಿಎಂಎಂ ಕೋರ್ಟ್ ಜಾಮೀನು ನೀಡಿದೆ. ಜಾಮೀನು ನೀಡುವ ಮೊದಲು ಅಲ್ಲಿನ ನ್ಯಾಯಾಧೀಶರು ದುನಿಯಾ ವಿಜಯ್ ಮತ್ತು ಆತನ ಸಹಚರರಿಗೆ ಬುದ್ದಿಮಾತನ್ನು ಹೇಳಿದ್ದಾರಂತೆ.
ಅರ್ಜಿಯ ವಿಚಾರಣೆ ನಡೆಸಿದ 8 ನೇ ಎಸಿಎಂಎಂ ಕೋರ್ಟ್ ನ್ಯಾಯಧೀಶರಾದ ಟಿ.ಪಿ.ರಾಮಲಿಂಗೇಗೌಡ ಅವರು ಜಾಮೀನು ನೀಡಿ ಆದೇಶವನ್ನು ಹೊರಡಿಸಿದ್ದಾರೆ. ಇದೇ ವೇಳೆ ನ್ಯಾಯಧೀಶರು ದುನಿಯಾ ವಿಜಯ್ ಗೆ ಸಿನಿಮಾ ನಟರು ರೋಲ್ ಮಾಡಲ್ ಆಗಿರುವರು ಹಾಗೆ ಇರಬೇಕು, ಹೇಗೆಂದರೆ ಹಾಗೆ ನಡೆಯಬಾರದು, ಸ್ವಲ್ಪ ನಿಯಂತ್ರಣದಲ್ಲಿ ಇರುವಂತೆ ಬುದ್ದಿ ಮಾತನ್ನು ಹೇಳಿ ಕಳುಹಿಸಿದ್ದಾರೆ. ಕಳೆದ ಸೋಮವಾರದಿಂದ ಸೆರೆವಾಸದಲ್ಲಿದ್ದ ದುನಿಯಾ ವಿಜಯ್ ಬೇಸರದಲ್ಲಿದ್ದರು. ಅವರನ್ನು ಹೊರಗಡೆ ಕಳುಹಿಸಿದರೆ ಸಾಕ್ಷಿ ನಾಶ ಮಾಡಬಹುದು ಎಂಬ ಮಾತುಗಳು ಕೂಡ ಕೇಳಿ ಬರುತ್ತಿತ್ತು. ಮುಂದೆ ದುನಿಯಾ ವಿಜಯ್ ಮತ್ತು ಪಾನಿಪೂರಿ ಕಿಟ್ಟಿ ರಾಜಿ ಸಂಧಾನ ಮಾಡಿಕೊಂಡು ಕೇಸ್ ವಾಪಸ್ ತೆಗೆದುಕೊಳ್ಳುತ್ತಾರ ಅನ್ನೋದನ್ನ ಕಾದು ನೋಡಬೇಕಿದೆ.
Comments