ನಟ ದರ್ಶನ್ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆದ ತಕ್ಷಣ ನೇರವಾಗಿ ಹೋಗಿದೆಲ್ಲಿಗೆ ಗೊತ್ತಾ?

01 Oct 2018 11:47 AM | Entertainment
1277 Report

ಕಳೆದ ಸೋಮವಾರವಷ್ಟೆ ಕಾರು ಅಪಘಾತದಲ್ಲಿ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್‌ ಅವರು ಶನಿವಾರ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ದರ್ಶನ್ ಡಿಸ್ಚಾರ್ಜ್ ಆದ ತಕ್ಷಣ ನೇರವಾಗಿ ಎಲ್ಲಿಗೆ ಹೋಗಿದ್ದಾರೆ ಗೊತ್ತಾ..?

ಡಿಸ್ಚಾರ್ಜ್ ಆದವರೇ ತಕ್ಷಣ ನೇರವಾಗಿ ದೇವರ ದರ್ಶನಕ್ಕೆ ಹೋಗಿದ್ದಾರೆ.  ನಟ ದರ್ಶನ್ ಕಾರು ಅಪಘಾತದಲ್ಲಿ ಗಾಯಗೊಂಡು ಆರು ದಿನಗಳಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಡಿಸ್ಚಾರ್ಜ್ ಆದವರು ಮನೆಯಲ್ಲಿ ವಿಶ್ರಾಂತಿ ತೆಗೆದುಕೊಳ್ಳುವ ಬದಲು ಚಾಮುಂಡಿ ಬೆಟ್ಟಕ್ಕೆ ಹೋಗಿ ದೇವಿಯ ಆಶೀರ್ವಾದ ಪಡೆದು ಬಂದಿದ್ದಾರೆ. ದರ್ಶನ್ ಏನೇ ಕೆಲಸ ಮಾಡುವ ಮುನ್ನ ಚಾಮುಂಡಿ ತಾಯಿಯ ಆಶೀರ್ವಾದ ಪಡೆಯುತ್ತಾರಂತೆ, ಈ ಕಾರಣ ಆಸ್ಪತ್ರೆಯಿಂದ ಬಿಡುಗಡೆಯಾಗುತ್ತಲೇ ನೇರವಾಗಿ ಚಾಮುಂಡಿಯ ಸನ್ನಿದಾನಕ್ಕೆ ಹೋಗಿ ಕಷ್ಟಗಳನ್ನೆಲ್ಲಾ ದೂರ ಮಾಡು ತಾಯಿ ಎಂದು ಬೇಡಿಕೊಂಡು ಆರ್ಶಿರ್ವಾದ ಪಡಿದಿದ್ದಾರೆ..

Edited By

Manjula M

Reported By

Manjula M

Comments