ದಾವಣಗೆರೆ ಅಭಿಮಾನಿಗಳಲ್ಲಿ ಅಭಿನಯ ಚಕ್ರವರ್ತಿ ಸುದೀಪ್ ಕ್ಷಮೆ ಕೇಳಿದ್ದು ಏಕೆ ಗೊತ್ತಾ..!?
ಸ್ಯಾಂಡಲ್ ವುಡ್’ನ ಸ್ಟಾರ್ಗಳೆಂದರೆ ಅಭಿಮಾನಿಗಳಿಗೆ ಏನೋ ಉಲ್ಲಾಸ, ಅದೇನೋ ಸಂತೋಷ,. ಅವರು ಎಲ್ಲಿಗಾದರೂ ಬರುತ್ತಾರೆ ಅಂದರೆ ಸಾಕು.. ಜನ ನೂಕು ನುಗ್ಗಲು ಇದ್ದರೂ ಕೂಡ ಅಲ್ಲಿಗೆ ಅಭಿಮಾನಿಗಳಿಗೂ ಹೋಗಿ ಮೆಚ್ಚಿನ ನಟ ನಟಿಯನ್ನು ನೋಡುತ್ತಾರೆ.
ಅದೇ ರೀತಿ ದಾವಣಗೆರೆಯಲ್ಲಿ ನಡೆಯುವ ಕಾರ್ಯಕ್ರಮವೊಂದಕ್ಕೆ ಸುದೀಪ್’ಗೆ ಆಹ್ವಾನವಿತ್ತು.. ಆದರೆ ಅಲ್ಲಿಗೆ ಹೋಗಲು ಸಾಧ್ಯವಾಗದ ಹಿನ್ನಲೆಯಲ್ಲಿ ಇದೀಗ ಕಿಚ್ಚ ಸುದೀಪ್ ಅವರು ವಿಡಿಯೋದ ಮೂಲಕ ದಾವಣಗೆರೆ ಅಭಿಮಾನಿಗಳಲ್ಲಿ ಕ್ಷಮೆ ಕೇಳಿದ್ದಾರೆ. ಎಸ್.. ಭಾನುವಾರದಂದು ನಂದ ಕಿಶೋರ್ ಮಾಲಿಕತ್ವದ ದೊನ್ನೆ ಬಿರಿಯಾನಿ ಹೋಟೆಲ್ ದಾವಣಗೆರೆ ಯಲ್ಲಿ ಆರಂಭವಾಗುತ್ತಿದ್ದ ಕಾರಣ ನಾನು ನನ್ನ ಸ್ನೇಹಿತನ ಹೋಟೇಲ್ ಉದ್ಘಾಟನೆಗೆ ಹೋಗಬೇಕಿತ್ತು. ಆದರೆ ಹೋಗಲು ಸಾಧ್ಯವಾಗಿಲ್ಲ. ಆದಕಾರಣ ಈ ವಿಚಾರಕ್ಕೆ ವಿಡಿಯೋ ಮೂಲಕ ನಟ ಸುದೀಪ್ ಕ್ಷಮೆ ಕೇಳಿದ್ದಾರೆ.
Comments