ಕರಿಚಿರತೆಗೆ 2 ದಿನ ಜೈಲೇ ಗತಿ: ದುನಿಯಾ ವಿಜಯ್ ಜಾಮೀನು ತೀರ್ಪು ಅ.1ಕ್ಕೆ ಮುಂದೂಡಿಕೆ
ನಟ ದುನಿಯಾ ವಿಜಯ್ ಜಿಮ್ ತರಬೇತುದಾರ ಮಾರುತಿಗೌಡ ಎಂಬಾತನನ್ನು ಅಪಹರಿಸಿ ಹಲ್ಲೆ ನಡೆಸಿದ ಸಂಬಂಧಿಸಿದಂತೆ ಸೇರಿ ನಾಲ್ವರು ಆರೋಪಿಗಳು ಸಲ್ಲಿಸಿದ್ದ ಜಾಮೀನು ಅರ್ಜಿ ವಿಚಾರಣೆಯು ನಡೆಸಿದ ನಗರದ 70ನೇ ಸೆಷನ್ಸ್ ಕೋರ್ಟ್ ತೀರ್ಪನ್ನು ಅಕ್ಟೋಬರ್ 1ಕ್ಕೆ ಮುಂದೂಡಿದೆ.
ದುನಿಯಾ ವಿಜಯ್ ಗೆ ಜಾಮೀನು ಕೊಟ್ಟರೆ ಸಾಕ್ಷಿಗಳನ್ನು ನಾಶ ಮಾಡುವ ಸಾಧ್ಯತೆಗಳಿವೆ..ಜಾಮೀನು ನೀಡಬಾರದು ಎಂದು ಸರ್ಕಾರಿ ಅಭಿಯೋಜಕರು ಆಕ್ಷೇಪಣೆಯನ್ನು ಸಲ್ಲಿಸಿದ್ದರು. ಮತ್ತೊಂದೆಡೆ ದುನಿಯಾ ವಿಜಿ ಹಾಗೂ ಇತರರ ಮೇಲೆ ಪೊಲೀಸರು ಉದ್ದೇಶಪೂರ್ವಕ 326 ಕಲಂ ಅಡಿ ಪ್ರಕರಣ ದಾಖಲಿಸಿದ್ದು, ತಮ್ಮ ಕಕ್ಷಿದಾರರಿಗೆ ಜಾಮೀನು ನೀಡಬೇಕೆಂದು ವಿಜಿ ಪರ ವಕೀಲರು ವಾದ ಮಂಡಿಸಿದ್ದರು. ಈ ವಾದದ ಆದೇಶವನ್ನು ಅ.1ಕ್ಕೆ ಕಾಯ್ದಿರಿಸಿದರು
Comments