ದೇವ್ರೆ…ಕೊನೆಗೂ ಪುಟ್ಟಗೌರಿ ಮದುವೆ ಧಾರವಾಹಿ ಮುಗಿಯುತ್ತಂತೆ..!

ಧಾರವಾಹಿಯಲ್ಲಿ ಅಭಿನಯಿಸುವ ನಟ ನಟಿಯರು ಬಹು ಬೇಗ ಜನರಿಗೆ ಹತ್ತಿರವಾಗಿ ಬಿಡುತ್ತಾರೆ.. ಧಾರವಾಹಿಯಲ್ಲಿ ಬರುವ ಪಾತ್ರಗಳು ನಮಗೆ ಹತ್ತಿರವಾದವು ಎಂದು ಭಾವಿಸಿರುತ್ತಾರೆ. ಅಂದಹಾಗೇ ಕಲರ್ಸ್ ಕನ್ನಡ ವಾಹಿನಿಯಲ್ಲಿ ಬರುತ್ತಿರುವ ಫೇಮಸ್ ಸೀರಿಯಲ್ “ಪುಟ್ಟಗೌರಿ ಮದುವೆ” ಇನ್ನು ಮುಂದೆ ಇರಲ್ಲ ಎಂದು ಹೇಳುತ್ತಿದ್ದಾರೆ. ಏನಪ್ಪಾ ಇದು ಟಿಆರ್ಪಿ ಧಾರವಾಹಿ ಇನ್ನು ಮುಂದೆ ಬರಲ್ವ ಅಂತಾ ಯೋಚನೆ ಮಾಡುತ್ತಿರುತ್ತಾರೆ.
ಅರೇ ಹೌದಾ ಪುಟ್ಟಗೌರಿ ಮದುವೆ ಸೀರಿಯಲ್’ನ ನಿಲ್ಸಿ ಬಿಡ್ತಾರೆ. ಅದನ್ನು ನೋಡುವ ವೀಕ್ಷಕರ ವರ್ಗ ಸಾಕಷ್ಟಿದೆ. ಆದ್ರೂ ಯಾಕೆ ಸೀರಿಯಲ್ ಸ್ಟಾಪ್ ಮಾಡ್ತಿದ್ದಾರೆ ಎನ್ನುವ ಪ್ರಶ್ನೆ ಎಲ್ಲರಲ್ಲೂ ಮೂಡುತ್ತದೆ. ಕಿರುತೆರೆಯ ಹೈ ಟಿ ಆರ್ಪಿ ಧಾರವಾಹಿ ಎಂಬ ಹೆಸರು ಪಡೆದ ಪುಟ್ಟಗೌರಿ ಸೀರಿಯಲ್ ಹಲವು ಟ್ವಿಸ್ಟ್ಗಳ ಮಧ್ಯೆಯೇ ಸ್ಟಾಪ್ ಆಗ್ತಾ ಇದ್ಯಂತೆ. ಇನ್ನುಮುಂದೆ ಪುಟ್ಟ ಗೌರಿ ಜಾಗದಲ್ಲಿ ಮಂಗಳಗೌರಿ ಬರುತ್ತಿದ್ದಾಳೆ ಎಂಬ ಸುದ್ದಿ ಹೊರ ಬಿದ್ದಿದೆ. ಇದೇನಪ್ಪಾ ಪುಟ್ಟಗೌರಿಯನ್ನೇ , ಮಂಗಳಗೌರಿಯಾಗಿ ಬದಲಾಗುತ್ತಾರಾ.. ಅಥವಾ ಇದು ಹೊಸ ಸೀರಿಯಲ್.. ಇಲ್ಲವೇ ಕೇವಲ ಗೌರಿಯನ್ನು ಬದಲಾವಣೆ ಮಾಡಿ ಆ ಕ್ಯಾರಕ್ಟರ್ಗೆ, ಮತ್ತು ಸೀರಿಯಲ್ ನೇಮ್ ಅನ್ನು ಮಂಗಳಗೌರಿ ಅಂತಾ ಮಾಡಲಾಗಿದೆಯಾ ಎಂಬುದು ತಿಳಿದುಬಂದಿದೆ.ಅಂದಹಾಗೇ ಪುಟ್ಟ ಗೌರಿ ಖ್ಯಾತಿಯ ರಂಜನಿ ಬಿಗ್ಬಾಸ್ ಸೀಸನ್ -6 ಗೆ ಸ್ಪರ್ಧಿಯಾಗಿ ಹೋಗ್ತಾ ಇರುವ ಸುದ್ದಿ ಇದೆ. ಆಗೋಂದು ವೇಳೆ ಆಕೆ ಕಂಟೆಸ್ಟಂಟ್ ಆಗಿ ಬಿಗ್ಬಾಸ್ ಹೌಸ್ಗೆ ಹೋಗುವ ಅವಕಾಶ ಇದ್ರೆ ಪುಟ್ಟಗೌರಿಯನ್ನು ಮಂಗಳಗೌರಿಯಾಗಿ ಮಾಡ್ತಾರೆ ಎಂಬ ಸುದ್ದಿ ಎಲ್ಲೆಡೆ ಕೇಳಿಬರುತ್ತಿದೆ.
Comments