ಪವನ್ ಕಲ್ಯಾಣ ಹತ್ಯೆಗೆ ಮೂವರಿಂದ ಸಂಚು: ಸ್ಪೋಟಕ ಮಾಹಿತಿ ಬಿಚ್ಚಿಟ್ಟ ಪವನ್ ಕಲ್ಯಾಣ್

ಟಾಲಿವುಡ್ ನಟ ಪವನ್ ಕಲ್ಯಾಣ ತನ್ನ ಅಭಿನಯದಿಂದಲೆ ಎಲ್ಲರ ಮನ ಗೆದ್ದಿದ್ದಾರೆ. ಆದರೆ ಇದೀಗ ಅವರ ಹತ್ಯೆ ಮಾಡಲು ಸಂಚು ರೂಪಿಸಲಾಗಿತ್ತು ಎಂಬ ಭಯಾನಕ ವಿಚಾರವನ್ನು ಸ್ವತಃ ಪವನ್ ಕಲ್ಯಾಣ ಅವರೇ ಬಹಿರಂಗಪಡಿಸಿದ್ದಾರೆ ಎನ್ನಲಾಗಿದೆ.
ಗುರುವಾರ ಆಂಧ್ರ ಪ್ರದೇಶದ ಪಶ್ಚಿಮ ಗೋದಾವರಿ ಜಿಲ್ಲೆಯ ಎಲುರು ಹಳೆಯ ಬಸ್ ನಿಲ್ದಾಣದ ಹತ್ತಿರ ನಡೆದ ಸಮಾವೇಶದಲ್ಲಿ ಮಾತನಾಡಿದ ಪವನ್ ಕಲ್ಯಾಣ್ ಈ ವಿಚಾರವನ್ನು ಬಹಿರಂಗಗೊಳಿಸಿದ್ದಾರೆ. ನನ್ನನ್ನು ಹತ್ಯೆ ಮಾಡಲು ಮೂರು ಜನ ನಡೆಸಿದ ಸಂಭಾಷಣೆಯ ಆಡಿಯೋ ತುಣುಕು ನಂಗೆ ಸಿಕ್ಕಿತ್ತು. ಆ ಮೂರು ಜನ ಯಾರೂ ಅಂತಾ ನನಗೆ ಗೊತ್ತಿಲ್ಲ.. ಆದರೆ ಮುಂದಿನ ಚುನಾವಣೆಯಲ್ಲಿ ನಾನು ಸ್ಪರ್ಧಿಸದಂತೆ ನೋಡಿಕೊಳ್ಳುವುದು ಅವರ ಉದ್ದೇಶವಾದಂತೆ ಕಾಣುತ್ತದೆ ಎಂದು ಪವನ್ ಬಹಿರಂಗಗೊಳಿಸಿದ್ದಾರೆ.
Comments