ನಟ ವಿನೋದ್ ರಾಜ್‌ಗೆ ಸೇರಿದ ಹಣ ದರೋಡೆ..!
ಸ್ಯಾಂಡಲ್’ವುಡ್ ನಟ ವಿನೋದ್ ರಾಜ್‌ಗೆ ಸೇರಿದ ಒಂದು ಲಕ್ಷ ಹಣ ದರೋಡೆ ಮಾಡಿರುವ ಘಟನೆ ಬೆಂಗಳೂರು ಹೊರವಲಯ ನೆಲಮಂಗಲ ಪಟ್ಟಣದಲ್ಲಿ ಇಂಡಸ್ ಇಂಡ್ ಬ್ಯಾಂಕ್ ಮುಂಭಾಗದಲ್ಲಿ ನಡೆದಿದೆ.
ವಿನೋದ್ ರಾಜ್ ಅವರು ಇಂದು ತಮ್ಮ ತೋಟದ ಕೂಲಿಯಾಳುಗಳಿಗೆ ಸಂಬಳ ನೀಡಲು, ಬ್ಯಾಂಕ್‌ನಿಂದ ಹಣ ಡ್ರಾ ಮಾಡಿಕೊಂಡು ವಾಪಸ್ಸು ಹೋಗುವ ವೇಳೆಯಲ್ಲಿ ವಿನೋದ್ ರಾಜ್ ಅವರ ಬಳಿಗೆ ಬಂದ ಕಳ್ಳರು ಸರ್ ನಿಮ್ಮ ಟೈರ್ ಪಂಚರ್ ಆಗಿದೆ ಎಂದು, ನಟ ವಿನೋದ್ ರಾಜ್ ಗಮನ ಬೇರೆಡೆ ಸೆಳೆದಿದ್ದಾರೆ. ಈ ವೇಳೆ ಕಾರಿನಲ್ಲಿದ್ದ ಒಂದು ಲಕ್ಷ ಹಣವನ್ನ ಕ್ಷಣಾರ್ಧದಲ್ಲಿ ದೋಚಿ ಪರಾರಿಯಾಗಿದ್ದಾರೆ.ಈ ಸಂಬಂಧ ನೆಲಮಂಗಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
Comments