ಕಲ್ಲಂಗಡಿ ಹಣ್ಣು ಮಾರಿದ ನಟಿ ‘ಕೆಂಡಸಂಪಿಗೆ’ ಚೆಲುವೆ..! ಕಾರಣ ಏನ್ ಗೊತ್ತಾ..?

ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಸದಾ ನಿಮ್ಮೊಂದಿಗೆ ಕಾರ್ಯಕ್ರಮವು ಈಗಾಗಲೇ ಸಾಕಷ್ಟು ಜನಪ್ರಿಯತೆಯನ್ನು ಗಳಿಸಿಕೊಂಡಿದೆ. ಆರ್ಥಿಕ ಸಂಕಷ್ಟದಲ್ಲಿ ಇರುವವರಿಗೆ ಸಹಾಯ ಹಸ್ತ ಚಾಚುವುದೇ 'ಸದಾ ನಿಮ್ಮೊಂದಿಗೆ' ಕಾರ್ಯಕ್ರಮದ ಉದ್ದೇಶವಾಗಿದ್ದು ಸಾಮಾನ್ಯ ಜನರ ರೀತಿ ತಾರೆಯರು ಒಂದು ದಿನ ಕೆಲಸ ಮಾಡಿ, ಅದರಿಂದ ಬಂದ ಹಣಕ್ಕೆ ಮತ್ತಷ್ಟು ಸೇರಿಸಿ ಜನರ ಕಣ್ಣೀರನ್ನು ಒರೆಸುವ ಕಾರ್ಯಕ್ರಮ 'ಸದಾ ನಿಮ್ಮೊಂದಿಗೆ' ಕಾರ್ಯಕ್ರಮ ಮಾಡುತ್ತಿದೆ.
ಕಳೆದ ವಾರದ 'ಸದಾ ನಿಮ್ಮೊಂದಿಗೆ' ಕಾರ್ಯಕ್ರಮದಲ್ಲಿ ಲವ್ಲಿ ಸ್ಟಾರ್ ಪ್ರೇಮ್ ಅವರು ದೇವರಾಜ್ ಎಂಬ ಎಳನೀರು ವ್ಯಾಪಾರಿಗೋಸ್ಕರ ಎಳನೀರು ಮಾರಿ ಸಹಾಯ ಮಾಡಿದ್ದನ್ನ ನಾವೆಲ್ಲ ನೋಡಿದ್ದೆವು. ಈ ವಾರ ಮಾನ್ವಿತಾ ಹರೀಶ್ ಸದಾನಿಮ್ಮೊಂದಿಗೆ ಕಾರ್ಯಕ್ರಮಕ್ಕೆ ಬಂದಿದ್ದಾರೆ. ಈ ವಾರದ 'ಸದಾ ನಿಮ್ಮೊಂದಿಗೆ' ಕಾರ್ಯಕ್ರಮದಲ್ಲಿ 'ಕೆಂಡಸಂಪಿಗೆ' ಚೆಲುವೆ ಮಾನ್ವಿತಾ ಹರೀಶ್ ಅವರು ಧನಲಕ್ಷ್ಮಿ ಎಂಬುವರಿಗೆ ಸಹಾಯ ಮಾಡಲು ಮುಂದಾಗಿದ್ದಾರೆ. ಹಾಗೇ, ಟ್ರಸ್ಟ್ ಒಂದಕ್ಕೆ ಸಹಾಯ ಹಸ್ತ ಚಾಚಲು ಮಾನ್ವಿತಾ ಅವರು ಮುಂದಾಗಿದ್ದಾರೆ. ವಿಕಲಚೇತನ ಟ್ರಸ್ಟ್ ಗೆ ಕೈ ಜೋಡಿಸಲು ಮಾನ್ವಿತಾ ಹರೀಶ್ ಕಲ್ಲಂಗಡಿ ಹಣ್ಣನ್ನು ಮಾರಿದ್ದಾರೆ.
Comments