ಕರೀನಾ ಪುತ್ರನನ್ನು ನೋಡಿಕೊಳ್ಳುವ ಈ ಅಜ್ಜಿಯ ಸಂಬಳ ಎಷ್ಟು ಗೊತ್ತಾ..?
ಎಷ್ಟೆ ಓದಿದರೂ ಕೂಡ ನಾವು ಅಂದು ಕೊಂಡ ಸಂಬಳ ಸಿಗದು ಸ್ವಲ್ಪ ಕಷ್ಟವೆ ಸರಿ.. ಆದರೆ ಕರೀನಾ ಕಪೂರ್ ಮಗ ತೈಮೂರ್ ಆಲಿಯನ್ನು ನೋಡಿಕೊಳ್ಳಲು ಮನೆ ಕೆಲಸದಾಕೆಗೆ ಎಷ್ಟು ಸಂಬಳ ಸಿಗುತ್ತಿದೆ ಗೊತ್ತಾ..? ಕೇಳಿದ್ರೆ ನಿಜಾನಾ ಅಂತೀರಾ..?
ಆಶ್ಚರ್ಯ ಅನಿಸಿದರೂ ನೀವು ಇದನ್ನು ನಂಬಲೇಬೇಕು. ಈ ಅಜ್ಜಿಗೆ ಸೈಫ್ ಆಲಿ ಖಾನ್ ದಂಪತಿ ಪ್ರತಿ ತಿಂಗಳು 1.5 ಲಕ್ಷ ರೂಪಾಯಿ ಸಂಬಳ ನೀಡುತ್ತಿದ್ದಾರೆ. ಕೆಲ ವೇಳೆ ಮಗುವಿನೊಂದಿಗೆ ಹೆಚ್ಚು ಸಮಯ ಕಳೆದರೆ ಹೆಚ್ಚುವರಿ ಸಂಬಳ ಪಡೆಯುತ್ತಾರೆ ಎಂಬ ಮಾಹಿತಿ ತಿಳಿದುಬಂದಿದೆ. ತೈಮೂರ್ ನ ನೋಡಿಕೊಳ್ಳಲೆಂದು ಇರುವ ಈಕೆಗೆ ಇಷ್ಟು ದೊಡ್ಡ ಸಂಬಳದೊಂದಿಗೆ ತೈಮೂರ್ ಜೊತೆ ಸುತ್ತಾಡಲು ಪ್ರತ್ಯೇಕ ಕಾರಿನ ವ್ಯವಸ್ಥೆಯನ್ನು ಕೂಡ ಮಾಡಲಾಗಿದೆ. ಇದರೊಂದಿಗೆ ತೈಮೂರ್ ವಿದೇಶ ಪ್ರವಾಸಕ್ಕೆ ಹೋದರೆ, ಈ ಅಜ್ಜಿಯೂ ಆತನೊಂದಿಗೆ ಹೋಗಬೇಕಂತೆ. ಮುಂಬಯಿಯ ಏಜೆನ್ಸಿ ಸಂಸ್ಥೆಯೊಂದು ಸೈಫ್ ಜೋಡಿಗೆ ಈ ದಾದಿಯನ್ನು ಪರಿಚಯ ಮಾಡಿಕೊಟ್ಟಿದ್ಯಂತೆ.
Comments