ಹೌದು ಸ್ವಾಮಿ : 'ಬಿಗ್ ಬಾಸ್ - 6' ಭರ್ಜರಿ ಓಪನಿಂಗ್’ಗೆ ಡೇಟ್ ಫಿಕ್ಸ್

ಕನ್ನಡ ಕಿರುತೆರೆಯಲ್ಲಿ 'ಬಿಗ್ ಬಾಸ್' ರಿಯಾಲಿಟಿ ಷೋ ಸಾಕಷ್ಟು ಅಭಿಮಾನಿಗಳನ್ನು ತನ್ನಲ್ಲಿ ಹಿಡಿದಿಟ್ಟುಕೊಳ್ಳುವಲ್ಲಿ ಯಶಸ್ವಿಯಾಗಿದೆ. ಈಗಾಗಲೇ ಕನ್ನಡದಲ್ಲಿ ಈ ಐದು ಸೀಸನ್’ಗಳನ್ನು ಯಶಸ್ವಿಯಾಗಿ ಮುಗಿಸಿದ್ದು, ಈಗ ಆರನೇ ಸೀಸನ್ ಪ್ರಾರಂಭಕ್ಕೆ ದಿನಗಣನೆ ಪ್ರಾರಂಭವಾಗಿದೆ.
'ಬಿಗ್ ಬಾಸ್' ಕಾರ್ಯಕ್ರಮ ಮತ್ತೆ ಯಾವಾಗ ಪ್ರಾರಂಭವಾಗುತ್ತದೆ ಎಂಬ ನಿರೀಕ್ಷೆ ಹಲವರಲ್ಲಿ ಇತ್ತು. ಈಗಾಗಲೇ 'ಬಿಗ್ ಬಾಸ್ ಕನ್ನಡ - 6' ಕಾರ್ಯಕ್ರಮದ ಎಲ್ಲಾ ರೀತಿಯ ತಯಾರಿಗಳು ಪ್ರಾರಂಭವಾಗಿದೆ. ಕೆಲ ದಿನಗಳ ಹಿಂದೆಯೇ ಸುದೀಪ್ ಅವರ ಒಂದು ಪ್ರೋಮೋ ಬಿಡುಗಡೆಯಾಗಿದ್ದು, ಇದೀಗ ಹೊಸ ಪ್ರೊಮೋ ರಿಲೀಸ್ ಆಗಿದೆ. ಈ ಬಾರಿ ಬಂದ ಪ್ರೋಮೋ ಮೂಲಕ ಕಾರ್ಯಕ್ರಮದ ಪ್ರಸಾರದ ದಿನಾಂಕ ತಿಳಿಸಲಾಗಿದೆ. ಮುಂದಿನ ತಿಂಗಳಿನಿಂದ ಕಾರ್ಯಕ್ರಮ ಪ್ರಸಾರವಾಗಲಿದೆ. 'ಬಿಗ್ ಬಾಸ್ ಕನ್ನಡ ಸೀಸನ್ 6'ರ ಗ್ರಾಂಡ್ ಒಪನಿಂಗ್ ಅಕ್ಟೋಬರ್ 21 ರಂದು ನಡೆಯಲಿದೆ.
Comments