ಲವ್ ಪ್ರಪೋಸ್ ಮಾಡಿದ ಅರ್ಜುನ್ ಕಪೂರ್ ಗೆ ಪರಿಣಿತಾ ಚೋಪ್ರಾ ಏನ್ ಹೇಳಿದ್ರು ಗೊತ್ತಾ..?
ಬಾಲಿವುಡ್ ನಟ ಅರ್ಜುನ್ ಕಪೂರ್ ಹಾಗೂ ನಟಿ ಪರಿಣಿತಾ ಚೋಪ್ರಾ ಕೆಮೆಸ್ಟ್ರಿ ಸಕತ್ತಾಗಿದೆ ಎಂದು ಅಭಿಮಾನಿಗಳು ಹೇಳುತ್ತಿದ್ದಾರೆ. ಅದಕ್ಕೆ ಕಾರಣ ಏನ್ ಗೊತ್ತಾ..? ‘ನಮಸ್ತೆ ಇಂಗ್ಲೆಂಡ್’ ಚಿತ್ರದ ಟ್ರೈಲರ್… ಈ ಟ್ರೈಲರ್ ನಲ್ಲಿ ಅವರಿಬ್ಬರ ಕೆಮೆಸ್ಟ್ರಿ ಸಖತ್ತಾಗಿಯೇ ವರ್ಕೌಟ್ ಆಗಿದೆಯಂತೆ. ಅಷ್ಟೆ ಅಲ್ಲದೆ ಅರ್ಜುನ್ ಕಪೂರ್ ಹಾಗೂ ನಟಿ ಪರಿಣಿತಾ ಚೋಪ್ರಾ ಕೆಮೆಸ್ಟ್ರಿ ಬಗ್ಗೆ ಇತ್ತೀಚೆಗೆ ಬಹಳಷ್ಟು ಚರ್ಚೆ ನಡೆಯುತ್ತಿದೆ.
‘ನಮಸ್ತೆ ಇಂಗ್ಲೆಂಡ್’ ಚಿತ್ರದಲ್ಲಿ ಇವರ ಜೋಡಿ ನೋಡಿ ಅಭಿಮಾನಿಗಳು ಅಷ್ಟೆ ಅಲ್ಲ ಅರ್ಜುನ್ ಕಪೂರ್ ಅವರ ಅಜ್ಜಿ ಕೂಡ ಪರಿಣಿತಾ ಅರ್ಜುನ್ ಗೆ ಸರಿಯಾದ ಜೋಡಿಯಾಗಿದ್ದು, ಅವಳನ್ನೆ ಮದುವೆಯಾಗುವಂತೆ ಹೇಳಿದ್ದಾರಂತೆ. ಹಾಗಾಗಿ ಇದೀಗ ಅರ್ಜುನ್ ಕಪೂರ್ ಅವರು ಪರಿಣಿತ ಚೋಪ್ರಾಗೆ ಪ್ರಪೋಸ್ ಮಾಡಿದ್ದಾರಂತೆ. ಡು ಯೂ ಲವ್ ಮಿ ಎಂದು ಪರಿಣಿತ ಚೋಪ್ರಾ ಅವರಿಗೆ ಕೇಳಿದ ತಕ್ಷಣ ಇದಕ್ಕೆ ಉತ್ತರಿಸಿರುವ ಪರಿಣಿತ ನೋ ಡೇಟ್ಸ್ ಫಾರ್ ಲವ್ ಎಂದು ಹೇಳಿದ್ದಾರಂತೆ, ಐ ಲವ್ ಮೈ ಹೇರ್ ಕಲರ್ ಎಂದು ಹೇಳಿದ್ರಂತೆ.. ಅರ್ಜುನ್ ಕಪೂರ್ ಕೇಳಿದ ಪ್ರಶ್ನೆಗೆ, ಈ ರೀತಿಯಾಗಿ ಉತ್ತರಿಸುವ ಮೂಲಕ ಪರಿಣಿತ ಚೋಪ್ರಾ ಜಾರಿಕೊಂಡಿದ್ದಾರೆ.
Comments