ಪತಿಯನ್ನು ಹುಡುಕಿಕೊಂಡು ಶೂಟಿಂಗ್ ಸೆಟ್ ಗೆ ಬಂದ ಪರಿಮಳ..! ಕಾರಣ ಏನ್ ಗೊತ್ತಾ..?

ಸಾಮಾನ್ಯವಾಗಿ ಬಣ್ಣದಬ ಜಗತ್ತಿನಲ್ಲಿರುವವರು ಪ್ಯಾಮಿಲಿ ಜೊತೆ ಟೈಮ್ ಪಾಸ್ ಮಾಡೋದು ಕಡಿಮೆಯೇ.. ಯಾವಾಗಲೂ ಶೂಟಿಂಗ್, ಡಬ್ಬಿಂಗ್ ಅಂತಾ ಬಿಸಿಯಾಗಿರುತ್ತಾರೆ. ಈ ನಡುವೆ ನವರಸ ನಾಯಕ ಜಗ್ಗೇಶ್ ಅವರ ಪತ್ನಿ ಪರಿಮಳ ಪತಿಯನ್ನು ಹುಡುಕಿಕೊಂಡು ಶೂಟಿಂಗ್ ಸೆಟ್ಗೆ ಹೋಗಿದ್ದಾರೆ.
ನವರಸ ನಾಯಕ ಜಗ್ಗೇಶ್ ಕ್ಯಾಮರಾ ಮುಂದೆ ಡೈಲಾಗ್ ಡೆಲಿವರಿ ಮಾಡೋವಾಗ ಇದ್ದಕ್ಕಿದ್ದಂತೆ ಅವರ ಪತ್ನಿ ಪರಿಮಳ ಕಾಣಿಸಿಕೊಂಡಿದ್ದಾರೆ. ಈ ಜೋಡಿ ಚಿತ್ರೀಕರಣದ ಸ್ಥಳದಲ್ಲಿ ಒಟ್ಟಾಗಿ ಕಾಣಿಸಿಕೊಳ್ಳುವುದು ಅತೀ ವಿರಳ. ಅಪರೂಪಕ್ಕೆ ಗಂಡನನ್ನು ನೋಡಲು ಪರಿಮಳ ಶೂಟಿಂಗ್ ಸೆಟ್ಗೆ ತೆರಳಿ ಸ್ವಲ್ಪ ಹೊತ್ತು ಕಾಲ ಕಳೆದಿದ್ದಾರೆ. ಈ ಕ್ಷಣಗಳ ಫೋಟೋವನ್ನು ನವರಸನಾಯಕ ಜಗ್ಗೇಶ್ ತಮ್ಮ ಟ್ವಿಟ್ಟರ್ನಲ್ಲಿ ಹಂಚಿಕೊಂಡು ಖುಷಿ ಪಟ್ಟಿದ್ದಾರೆ.
Comments