ಹುಟ್ಟುಹಬ್ಬದಂದು ಮದುವೆ ಗುಟ್ಟು ರಟ್ಟು ಮಾಡ್ತಾರಾ 'ಬಾಹುಬಲಿ'

ನಟ ಪ್ರಭಾಸ್ ಮದುವೆ ಯಾವಾಗಾ ಎನ್ನುವ ಪ್ರಶ್ನೆ ಎಲ್ಲ ಅಭಿಮಾನಿಗಳನ್ನು ತುಂಬಾ ಕಾಡುತ್ತಿದೆ.. ಅದರಲ್ಲೂ ಹೆಣ್ಣು ಮಕ್ಕಳಂತೂ ಸಿಕ್ಕಿದರೆ ಪ್ರಭಾಸ್ ಅಂತ ಹುಡುಗ ಸಿಗಬೇಕು ಅಂತ ಆಸೆ ಪಡುತ್ತಾರೆ. ಮುಂದಿನ ತಿಂಗಳು ಪ್ರಭಾಸ್ 39ನೇ ವರ್ಷಕ್ಕೆ ಕಾಲಿಡುತ್ತಿದ್ದು, ಅಭಿಮಾನಿಗಳಿಗೆ ಖುಷಿ ಸುದ್ದಿ ನೀಡುವ ಸಾಧ್ಯತೆಯಿದೆ ಎನ್ನಲಾಗಿದೆ.
ಬಾಹುಬಲಿ ಹಾಗೂ ಬಾಹುಬಲಿ-2 ಚಿತ್ರದ ಮೂಲಕ ಅಭಿಮಾನಿಗಳನ್ನು ಗಿಟ್ಟಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದ ಪ್ರಭಾಸ್ ಸದ್ಯ ಸಾಹೋ ಚಿತ್ರದಲ್ಲಿ ಬ್ಯುಸಿಯಿದ್ದಾರೆ. ಸಾಹೋ ಚಿತ್ರದ ಮೇಲೆ ಅಭಿಮಾನಿಗಳ ನಿರೀಕ್ಷೆ ಹೆಚ್ಚಿದೆ. ಜೊತೆಗೆ ಪ್ರಭಾಸ್ ಮದುವೆ ಯಾವಾಗಾ ಎಂಬ ಪ್ರಶ್ನೆಗೂ ಕೂಡ ಉತ್ತರದ ಹುಡುಕಾಟದಲ್ಲಿದ್ದಾರೆ. ಈಗಾಗಲೇ ಪ್ರಭಾಸ್ ಜೊತೆ ಅನೇಕ ಹಿರೋಯಿನ್ ಗಳ ಹೆಸರು ಕೇಳಿಬರುತ್ತಿದೆ. ಆದ್ರೆ ಪ್ರಭಾಸ್ ಹಾಗೂ ಅನುಷ್ಕಾ ಶೆಟ್ಟಿ ಹೆಸರು ಮೊದಲ ಸ್ಥಾನದಲ್ಲಿದೆ. ಪ್ರಭಾಸ್ ಯಾರನ್ನು ಮದುವೆಯಾಗ್ತಾರೆ ಎಂಬ ಕುತೂಹಲಕ್ಕೆ ಮುಂದಿನ ತಿಂಗಳು ತೆರೆ ಬೀಳುವ ಎಲ್ಲಾ ಸಾಧ್ಯತೆಯಿದೆ ಎನ್ನಲಾಗಿದೆ.
Comments