ಕರಿಚಿರತೆಗೆ ಸದ್ಯಕ್ಕೆ ಬೋನೆ ಗತಿ: ಜೈಲಿನಲ್ಲಿ ಕಣ್ಣಿರಿಟ್ಟ ದುನಿಯಾ ವಿಜಯ್

ಜಿಮ್ ಟ್ರೈನರ್ ಮಾರುತಿಗೌಡ ಹಲ್ಲೆ ಪ್ರಕರಣದಲ್ಲಿ ಪರಪ್ಪನ ಅಗ್ರಹಾರ ಸೇರಿರುವ ನಟ ದುನಿಯಾ ವಿಜಯ್ ಅವರ ಜಾಮೀನು ಅರ್ಜಿಯನ್ನು 8ನೇ ಎಸಿಎಂಎಂ ನ್ಯಾಯಾಲಯವು ವಜಾ ಮಾಡಿದೆ. ಇದೇ ವೇಳೆ ತನಗೆ ಹಾಗೂ ತನ್ನ ಸಹಚರರಿಗೆ ಜಾಮೀನು ಅರ್ಜಿ ಸಿಗದ ಕಾರಣದಿಂದ ದುನಿಯಾ ವಿಜಯ್ ತಾವು ಇರುವ ಜೈಲಿನ ಕೊಠಡಿಯಲ್ಲಿ ಗೆಳಯರ ಜೊತೆಗೆ ಕಣ್ಣೀರಿಟ್ಟಿದ್ದಾರೆ ಎನ್ನಲಾಗಿದೆ.
ಜಾಮೀನು ಅರ್ಜಿ ವಿಚಾರಣೆಗೆ ಸಂಬಂಧಪಟ್ಟಂತೆ ಜೈಲಿನಲ್ಲಿ ಸುದ್ದಿಯನ್ನು ನೋಡುತ್ತಿದ್ದ ದುನಿಯಾ ವಿಜಯ್ ತನಗೆ ಕೋರ್ಟ್ ಜಾಮೀನು ಅರ್ಜಿಯನ್ನು ನಿರಾಕರಣೆ ಮಾಡಿದ ಸುದ್ದಿಯನ್ನು ನೋಡಿದ ಕೂಡಲೇ, ಕೊಠಡಿಗೆ ತೆರಳಿ ಅತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ಇನ್ನು ತಮ್ಮ ಕಕ್ಷಿದಾರ ದುನಿಯಾ ವಿಜಯ್ ಹಾಗೂ ಆತನ ಸಹಚರರ ವಿರುದ್ದ ಜಾಮೀನು ಅರ್ಜಿ ತಿರಸ್ಕಾರ ಮಾಡಿದ ವಿಷಯಕ್ಕೆ ಸಂಬಂಧಪಟ್ಟಂತೆ ವಿಜಯ್ ಪರ ವಕೀಲರು ಮಾಧ್ಯಮಗಳ ಜೊತೆ ಮಾತನಾಡಿ, ತೀರ್ಪಿನ ಮಾಹಿತಿ ಸಿಕ್ಕ ನಂತರ ಸೆಷನ್ಸ್ ಕೋರ್ಟಿನಲ್ಲಿ ಜಾಮೀನು ಅರ್ಜಿ ಸಲ್ಲಿಸಲಾಗುವುದು ಎಂದು ತಿಳಿಸಿದ್ದಾರೆ.
Comments