10 ನಿಮಿಷದ ಡ್ಯಾನ್ಸ್‌ಗೆ, ರಶ್ಮಿಕಾ ಪಡೆದ ಸಂಭಾವನೆ ಎಷ್ಟು ಗೊತ್ತಾ..?

26 Sep 2018 5:34 PM | Entertainment
1082 Report

ಇತ್ತಿಚಿಗೆ ಸ್ಯಾಂಡಲ್ ವುಡ್ ನ ಕಿರಿಕ್ ಪಾರ್ಟಿ ಹುಡುಗಿ ಸಾನ್ವಿ ಸಿಕ್ಕಾಪಟ್ಟೆ ಕಾಸ್ಟ್ಲಿಆಗಿಬಿಟ್ಟಿದ್ದಾರೆ. ಗೀತಾ ಗೋವಿಂದಂ ಸಿನಿಮಾ ಹಿಟ್​​ ಆಗಿದ್ದೇ ತಡ ರಶ್ಮಿಕಾ ಮಂದಣ್ಣ ಹವಾ ಟಾಲಿವುಡ್​​ನಲ್ಲೂ ಹೆಚ್ಚಾಗಿದೆ ಈಗ ರಶ್ಮಿಕಾ ಕೇವಲ 10 ನಿಮಿಷ ಡ್ಯಾನ್ಸ್‌​ ಮಾಡಲು ಲಕ್ಷ ಲಕ್ಷ ಸಂಭಾವನೆಯನ್ನ ಪಡೆಯುತ್ತಿದ್ದಾರಂತೆ.

ಟಾಲಿವುಡ್​​ ಸಿನಿಮಾ ಮಾರ್ಕೇಟ್​ನಲ್ಲಿ ರಶ್ಮಿಕಾಗೆ ಬೇಡಿಕೆ ಹೆಚ್ಚಾಗಿದೆ. ಇದೀಗ ರಶ್ಮಿಕಾ ಸಂಭಾವನೇ ಗೀತಾ ಗೋವಿಂದಂ ಸಿನಿಮಾದ ನಂತರ ದುಪ್ಪಟ್ಟಾಗಿದೆ. 20 ರಿಂದ 25 ಲಕ್ಷ ಸಂಬಾವನೆ ಪಡೀತಿದ್ದ ರಶ್ಮಿಕಾ ಇದೀಗ ತನ್ನ ಸಂಭಾವನೆಯನ್ನು 50 ಲಕ್ಷಕ್ಕೆ ಹೆಚ್ಚು ಮಾಡಿಕೊಂಡಿದ್ದಾರಂತೆ. ಅಷ್ಟೇ ಅಲ್ಲಾ ಕೇವಲ ಹತ್ತು ನಿಮಿಷ ಡಾನ್ಸ್​​ ಮಾಡೋಕೆ ಹತ್ತು ಲಕ್ಷ ಸಂಭಾವನೆ ಪಡೀತಿದ್ದಾರೆ.ಹೌದು, ಇದೇ ಬುಧುವಾರ ಖಾಸಗಿ ರೇಡಿಯೋ ವಾಹಿನಿಯೊಂದು ಏರ್ಪಡಿಸಿರೋ ಕಾರ್ಯಕ್ರಮದಲ್ಲಿ ರಶ್ಮಿಕಾ ಲೈವ್​ ಡಾನ್ಸ್​ ಮಾಡ್ತಿದ್ದಾರಂತೆ. ಅದ್ರಲ್ಲಿ ರಶ್ಮಿಕಾ 10 ನಿಮಿಷ ಡಾನ್ಸ್​ಗೆ ಹತ್ತು ಲಕ್ಷ ರೂ ಸಂಭಾವನೆಯನ್ನು ಪಡೆದಿದ್ದಾರಂತೆ.

Edited By

Manjula M

Reported By

Manjula M

Comments