ದುನಿಯಾ ವಿಜಯ್ ಪತ್ನಿ ನಾಗರತ್ನಗೆ ಬರೆದ ಚೀಟಿಯಲ್ಲಿ ಏನಿತ್ತು..!?

ನಟ ದುನಿಯಾ ವಿಜಯ್, ಜಿಮ್ ಟ್ರೈನರ್ ಮಾರುತಿ ಗೌಡ ಅವರ ಮೇಲೆ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಪರಪ್ಪನ ಅಗ್ರಹಾರದಲ್ಲಿದ್ದಾರೆ.
ತಾವು ಜೈಲಿಗೆ ಬಂದ ಬಳಿಕ ಕುಟುಂಬಸ್ಥರಾಗಲಿ ಅಥವಾ ಚಿತ್ರರಂಗದವರಾಗಲಿ ಆಗಮಿಸದಿರುವುದಕ್ಕೆ ಜೈಲಾಧಿಕಾರಿಗಳ ಮುಂದೆ ದುನಿಯಾ ವಿಜಯ್ ತಮ್ಮ ಬೇಸರ ವ್ಯಕ್ತಪಡಿಸಿದ್ದಾರೆ, ಇಂದು ಪತ್ನಿ ನಾಗರತ್ನ ತಮ್ಮ ಭೇಟಿಗೆ ಬಂದ ವೇಳೆ ಅವರನ್ನು ನೋಡಲು ದುನಿಯಾ ವಿಜಯ್ ನಿರಾಕರಿಸಿದ್ದಾರೆ. ಅಷ್ಟೇ ಅಲ್ಲ, ಜೈಲು ಸಿಬ್ಬಂದಿ ಬಳಿ ನಿನ್ನನ್ನು ನೋಡಲು ನನಗೆ ಇಷ್ಟ ಇಲ್ಲವೆಂದು ದುನಿಯಾ ವಿಜಯ್, ನಾಗರತ್ನಗೆ ಚೀಟಿ ಕಳುಹಿಸಿದ್ದಾರೆ ಎಂದು ಹೇಳಲಾಗಿದ್ದು, ಇದನ್ನು ನೋಡುತ್ತಲೇ ನಾಗರತ್ನ ಕಣ್ಣೀರಿಟ್ಟು ಬೇಸರಗೊಂಡಿದ್ದಾರೆ.
Comments