ಬಹುಭಾಷ ನಟಿ ರಂಭ ಮನೆಗೆ ಎಂಟ್ರಿ ಕೊಟ್ಟ ಹೊಸ ಅಥಿತಿ ಯಾರ್ ಗೊತ್ತಾ..?

ಬಹುಭಾಷಾ ನಟಿಯಾದ ರಂಭ ತಮ್ಮಅಭಿಮಾನಿಗಳಿಗೆ ಗುಡ್ ನ್ಯೂಸ್ ಕೊಟ್ಟಿದ್ದಾರೆ. ಗಂಡು ಮಗುವಿಗೆ ಜನ್ಮ ನೀಡಿರುವ ರಂಭಾ ಈ ಖುಷಿಯ ವಿಚಾರವನ್ನು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
ರಂಭಾ ಉದ್ಯಮಿ ಇಂದ್ರನ್ ಪಥಮನಥಾನ್ ಎಂಬುವವರನ್ನು ಮದುವೆಯಾಗಿದ್ದರು.ಈ ಜೋಡಿಗೆ ಈಗಾಗಲೇ ಲಾನ್ಯಾ, ಸಾಶಾ ಎನ್ನುವ ಇಬ್ಬರು ಹೆಣ್ಣು ಮಕ್ಕಳಿದ್ದಾರೆ. ಇದೀಗ ಮೂರನೇ ಮಗುವಿಗೆ ಸೆ. 23 ರಂದು ಜನ್ಮ ನೀಡಿದ್ದಾರೆ ರಂಭಾ. ಬಹುಭಾಷಾ ನಟಿಯಾಗಿದ್ದು ಹಿಂದಿ, ಮಲಯಾಳಂ, ಕನ್ನಡ, ಬಂಗಾಳಿ ಚಿತ್ರದಲ್ಲಿ ನಟಿಸಿದ್ದಾರೆ. ಕನ್ನಡದಲ್ಲಿ ಸರ್ವರ್ ಸೋಮಣ್ಣ, ಕೆಂಪಯ್ಯ ಐಪಿಎಸ್, ಓ ಪ್ರೇಮವೇ, ಪಾಂಚಾಲಿ, ಭಾವ- ಭಾಮೈದ, ಪಾಂಡುರಂಗ ವಿಠಲ, ಅನಾಥರು ಚಿತ್ರದಲ್ಲಿ ನಟಿಸಿದ್ದಾರೆ..
Comments