‘ಮದಗಜ’ನಿಗೆ ನಾಯಕಿ ಆದ ಬುಲ್ ಬುಲ್ ಬೆಡಗಿ ರಚಿತಾ..!?
ಡಿಂಪಲ್ ಕ್ವೀನ್ ಗೆ ಆಫರ್ ಮೇಲೆ ಆಫರ್…ಲಕ್ ಅಂದ್ರೆ ಇದೆ ಅನ್ಸುತ್ತೆ.. ಮದಗಜ ಚಿತ್ರದ ಹೆಸರು ಕೇಳುತ್ತಿದ್ದಂತೆ ಈ ಚಿತ್ರದಲ್ಲಿ ಶ್ರೀಮುರಳಿಗೆ ನಾಯಕಿಯಾಗಿ ಕಾನಿಸಿಕೊಳ್ಳುತ್ತಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ.
ರೋರಿಂಗ್ ಸ್ಟಾರ್ ಶ್ರೀಮುರಳಿ ಜೊತೆಗೆ ಈಗಾಗಲೇ ರಥಾವರ ಸಿನಿಮಾದಲ್ಲಿ ಅಭಿನಯಿಸಿದ್ದು , ನಿರ್ದೇಶಕ ಮಹೇಶ್ ಕುಮಾರ್ ಜೊತೆ ಅಯೋಗ್ಯ ಸಿನಿಮಾ ಮಾಡಿದ್ದಾರೆ. ನಿರ್ದೇಶಕ, ನಾಯಕ ಇಬ್ಬರ ಕಾಂಬಿನೇಶನ್‌ನಲ್ಲೂ ರಚಿತಾ ಸೂಪರ್ ಹಿಟ್ ಕೊಟ್ಟಿರೋದ್ರಿಂದ, ಈ ಸಿನಿಮಾ ಮತ್ತೊಂದು ಹಿಟ್ ಕಾಂಬಿನೇಶನ್ ಆಗ್ತಿದೆ. ಮದಗಜ ಸಿನಿಮಾದಲ್ಲಿ ಸೌತ್ ಸಿನಿದುನಿಯಾದ ಒಂದಷ್ಟು ಸ್ಟಾರ್‌ಗಳು ಅಭಿನಯಿಸಲಿದ್ದಾರೆ. ಜಗಪತಿ ಬಾಬು ಈ ಚಿತ್ರದಲ್ಲಿ ವಿಲನ್ ಆಗಿ ಕಾಣಿಸಿಕೊಳ್ಳೋದು ಬಹುತೇಕ ಖಚಿತವಾಗಿದೆ. ಅಯೋಗ್ಯ ಚಿತ್ರಕ್ಕೆ ಸಂಭಾಷಣೆ ಬರೆದಿರುವ ಶರತ್ ಚಕ್ರವರ್ತಿಯವರೇ ಸಂಭಾಷಣೆ ಬರೆಯೋ ಸಾಧ್ಯತೆ ಇದೆ. ಅರ್ಜುನ್ ಜನ್ಯರವರೇ ಸಂಗೀತ ಸಂಯೋಜಿಸೋ ಸಾಧ್ಯತೆಯೂ ಇದೆ.ಚಿತ್ರ ಸೆಟ್ಟೆರಿದ ಮೇಲೆ ಎಲ್ಲವೂ ತಿಳಿಯುತ್ತದೆ. ಅಲ್ಲಿಯವರೆಗೂ ಕಾಯಲೇಬೇಕು.
Comments