ದುನಿಯಾ ವಿಜಯ್ ಪ್ರಕರಣ: ಪಾನಿಪುರಿ ಕಿಟ್ಟಿಗೂ ಶುರುವಾಯ್ತು ಬಂಧನದ ಭೀತಿ?

ಜಿಮ್ ಟ್ರೈನರ್ ಮಾರುತಿಗೌಡ ಹಲ್ಲೆಯ ವಿಚಾರವಾಗಿ ಜೈಲಿನಲ್ಲಿರುವ ದುನಿಯಾ ವಿಜಯ್ ಮೇಲೆ ಎಫ್ಐಆರ್ ದಾಖಲಿಸಿದ್ದ ಎದುರಾಳಿಗಳಿಗೆ ಬಂಧನದ ಭೀತಿ ಶುರುವಾಗಿದೆ. ತಮ್ಮ ಗೆಳೆಯ ಮೇಲೆ ಹಲ್ಲೆ ಪ್ರಕರಣದಲ್ಲಿ ಚಲನಚಿತ್ರ ನಟ ದುನಿಯಾ ವಿಜಯ್ ಜೈಲು ಸೇರಿದ ನಂತರ ಈಗ ಅವರ ವಿರುದ್ಧ ದೂರು ದಾಖಲಿಸಿದ್ದ ಎದುರಾಳಿಗೂ ಕೂಡ ಸಂಕಷ್ಟ ಎದುರಾದಂತಿದೆ.
ನಟ ದುನಿಯಾ ವಿಜಯ್ ಮತ್ತು ಅವರ ಪುತ್ರ ಸಾಮ್ರಾಟ್‌ಗೆ ಜೀವ ಬೆದರಿಕೆ ಹಾಕಿದ ಆರೋಪದಡಿಯಲ್ಲಿ ಜಿಮ್ ತರಬೇತುದಾರರಾದ ಪಾನಿಪೂರಿ ಕಿಟ್ಟಿ ವಿರುದ್ಧ ಎಫ್‌ಐಆರ್ ದಾಖಲಿಸಿದ ಹೈಗ್ರೌಂಡ್ಸ್ ಠಾಣೆ ಪೊಲೀಸರು, ಈ ಸಂಬಂಧ ವಿಚಾರಣೆಗೆ ಹಾಜರಾಗುವಂತೆ ಕಿಟ್ಟಿಮತ್ತು ಆತನ ತಂಡಕ್ಕೆ ಪೊಲೀಸರು ಸೂಚಿಸಿದ್ದಾರೆ ಎನ್ನಲಾಗಿದೆ. ನ್ಯಾಯಾಲಯದ ಆದೇಶದ ಮೇರೆಗೆ ದೂರಿನ ಅನ್ವಯ ಸೋಮವಾರ ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ ಎಂಬ ಮಾಹಿತಿ ತಿಳಿದುಬಂದಿದೆ.
Comments