ದ್ವಾರಕ್ವೀಶ್ ನಿರ್ಮಾಣದ 52ನೇ ಚಿತ್ರದಲ್ಲಿ ಸ್ಕ್ರೀನ್ ಷೇರ್ ಮಾಡಿಕೊಳ್ತಿದ್ದಾರೆ ಡಿಂಪಲ್ ಕ್ವೀನ್-ಹ್ಯಾಟ್ರಿಕ್ ಹೀರೋ

ಸಧ್ಯ ಕನ್ನಡಚಿತ್ರರಂಗದ ಮೋಸ್ಟ್ ಟಾಪ್ ನಟಿಯರಲ್ಲಿ ಒಬ್ಬರಾದ ರಚಿತಾರಾಮ್ ಲಕ್ ಖುಲಾಯಿಸಿದೆ ಅನ್ಸುತ್ತೆ. ಆಲ್ ಮೋಸ್ಟ್ ಟಾಪ್ ನಟರ ಜೊತೆ ನಟಿಸಿರುವ ಈ ನಟಿಗೆ ಮತ್ತೊಬ್ಬ ಸ್ಟಾರ್ ನಟರ ಜೊತೆ ನಟಿಸಿಸುವ ಅವಕಾಶ ಸಿಕ್ಕಿದೆ. ಯಾರ್ ಅದು ಅಂತಾ ಯೋಚನೆ ಮಾಡುತ್ತಿದ್ದೀರಾ ನೀವೆ ಮುಂದೆ ಓದಿ..
ಆಪ್ತಮಿತ್ರ, ಆಪ್ತರಕ್ಷಕ, ಶಿವಲಿಂಗ ಸಿನಿಮಾಗಳ ಖ್ಯಾತಿಯ ನಿರ್ದೇಶಕರಾದ ಪಿ.ವಾಸು ನಿರ್ದೇಶನದಲ್ಲಿ, ದ್ವಾರಕೀಶ್ ಬ್ಯಾನರ್‌ನಲ್ಲಿ ಯೋಗಿ ದ್ವಾರಕೀಶ್ ನಿರ್ಮಾಣದಲ್ಲಿ ನಿರ್ಮಾಣವಾಗುತ್ತಿರುವ ದ್ವಾರಕೀಶ್ ಬ್ಯಾನರ್‌ನ 52ನೇ ಚಿತ್ರಕ್ಕೆ ರಚಿತಾ ನಾಯಕಿಯಾಗಿ ಗ್ರೀನ್ ಸಿಗ್ನಲ್ ನೀಡಿದ್ದಾರೆ. ಆದರೆ ವಿಶೇಷ ಏನಪ್ಪಾ ಅಂದ್ರೆ ಈ ಚಿತ್ರದಲ್ಲಿ ಡಾ. ಶಿವರಾಜ್‌ಕುಮಾರ್ ನಾಯಕರಾಗಿ ತೆರೆ ಮೇಲೆ ಕಾಣಿಸಿಕೊಳ್ತಿದ್ದಾರೆ. ಈಗಾಗಲೇ ರುಸ್ತುಂ ಸಿನಿಮಾದಲ್ಲಿ ಗೆಸ್ಟ್ ರೋಲ್‌ನಲ್ಲಿ ಕಾಣಿಸಿಕೊಂಡಿದ್ರು, ಈ ಸಿನಿಮಾ ಮೂಲಕ ಡಿಂಪಲ್ ಕ್ವೀನ್ ಶಿವಣ್ಣನ ಸಿನಿಮಾದಲ್ಲಿ ಫುಲ್‌ಫ್ಲೇಡ್ಜ್ ಆಗಿ ಕಾಣಿಸಿಕೊಳ್ತಿದ್ದಾರೆ. ಅಂದ್ಹಾಗೆ ಈ ಸಿನಿಮಾ ಈ ವರ್ಷಾಂತ್ಯಕ್ಕೆ ಅಥವಾ ಹೊಸ ವರ್ಷಕ್ಕೆ ಸೆಟ್ಟೇರೋ ಸಾಧ್ಯತೆ ಇದೆ ಚಿತ್ರತಂಡ ತಿಳಿಸಿದೆ.
Comments