ರಾಜ್ಯ ರಾಜಕಾರಣದತ್ತ ಒಲವು ತೋರಿಸಿದ ಚಾರ್ ಮಿನಾರ್ ಹುಡುಗಿ..!!
ಸಾಮಾನ್ಯವಾಗಿ ಸಿನಿಮಾರಂಗದ ಬಹುತೇಕ ಮಂದಿ ರಾಜಕೀಯದತ್ತ ಒಲವು ತೋರಿಸೋದು ಕಾಮನ್. ರಾಜಕಾರಣ ಹಾಗೂ ಸಿನಿಮಾ ಒಂದೇ ನಾಣ್ಯದ ಎರಡ ಮುಖಗಳಿದ್ದಂತೆ. ಸಾಕಷ್ಟು ಕಲಾವಿದರು ಸಿನಿಮಾ ಹಾಗೂ ರಾಜಕೀಯ ಎರಡರನ್ನು ಸರಿದೂಗಿಸಿಕೊಂಡು ಹೋಗುತ್ತಿದ್ದಾರೆ ಹಾಗೂ ಎರಡರಲ್ಲೂ ಯಶಸ್ಸನ್ನು ಕಾಣುತ್ತಿದ್ದಾರೆ. ಇದೀಗ ಮತ್ತೊಬ್ಬ ನಟಿ ರಾಜಕೀಯದ ಕಡೆ ಒಲವು ತೋರಿಸಿದ್ದಾರೆ.
ಮೇಘನಾ ಗಾಂವ್ಕರ್, ಸ್ಯಾಂಡಲ್ ವುಡ್ ನ ಪೇಮಸ್ ನಟಿಯರಲ್ಲಿ ಇವರು ಕೂಡ ಒಬ್ಬರು. ಸದಭಿರುಚಿಯ ಸಿನಿಮಾಗಳಿಂದಾಗಿ ಮೇಘನಾ ಸಿಕ್ಕಾಪಟ್ಟೆ ಫೇಮಸ್ ಆಗಿರೋರು. ನಟಿಸಿರೋದು ಕೆಲವು ಸಿನಿಮಾಗಳಾದ್ರೂ ಅಭಿಮಾನಿಗಳ ನೆನಪಿನಲ್ಲಿ ಅಚ್ಚುಳಿದಿದ್ದಾರೆ. ತನ್ನನ್ನ ರಾಜಕಾರಣದಲ್ಲಿ ತೊಡಗಿಕೊಳ್ಳುವ ಮನಸ್ಸು ಮಾಡಿದ್ದಾರೆ ಮೇಘನಾ. ನಿನ್ನೆಯಷ್ಟೇ ಮೇಘನಾರ ಅಜ್ಜಿ, ಗುಲ್ಬರ್ಗ ಮೇಯರ್ ಆಗಿ ಆಯ್ಕೆಯಾಗಿದ್ದರು. ಈ ಖುಷಿಯನ್ನು ಟ್ವಿಟ್ಟರ್ನಲ್ಲಿ ಹಂಚಿಕೊಂಡು ಸಂಭ್ರಮಿಸಿದ್ದಾರೆ. ಆ ಸಮಯದಲ್ಲಿ ಅಭಿಮಾನಿಯೊಬ್ಬರು ರಾಜಕೀಯ ಕುರಿತು ಪ್ರಶ್ನೆ ಮಾಡಿದ್ದರು. ಈ ಪ್ರಶ್ನೆಗೆ ರಾಜಕೀಯದ ಆಸಕ್ತಿ ನನಗೆ ಬಾಲ್ಯದಿಂದಲೂ ಇದೆ. ಭವಿಷ್ಯದಲ್ಲಿ ನೋಡೋಣ’ ಅಂತಾ ಮೇಘನಾ ರೀಟ್ವೀಟ್ ಮಾಡಿರೋದು ಅವರ ಭವಿಷ್ಯದ ಬಗ್ಗೆ ಮುನ್ಸೂಚನೆಯನ್ನು ನೀಡಿದೆ.
Comments