`ಥಗ್ಸ್ ಆಫ್ ಹಿಂದೂಸ್ತಾನ್' ಚಿತ್ರದ ಮೊದಲ ಪೋಸ್ಟರ್ ರಿಲೀಸ್

ಈ ವರ್ಷದ ಕೊನೆಯಲ್ಲಿ ಬರುತ್ತಿರುವ ಬಹು ನಿರೀಕ್ಷಿತ ಚಿತ್ರಗಳಲ್ಲಿ ಒಂದಾದ ಥಗ್ಸ್ ಆಫ್ ಹಿಂದೂಸ್ತಾನ್ ಕೂಡ ಒಂದಾಗಿದ್ದು. ಅಮೀರ್ ಖಾನ್, ಅಮಿತಾಬ್ ಬಚ್ಚನ್, ಕತ್ರಿನಾ ಕೈಫ್ ಅಭಿನಯದ ಚಿತ್ರಕ್ಕೆ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ. ಥಗ್ಸ್ ಆಫ್ ಹಿಂದೂಸ್ತಾನ್ ಚಿತ್ರದ ಮೊದಲ ಪೋಸ್ಟರ್ ಮಂಗಳವಾರ ರಿಲೀಸ್ ಆಗಿದೆ.
ಥಗ್ಸ್ ಆಫ್ ಹಿಂದೂಸ್ತಾನ್ ಚಿತ್ರ ತಂಡ ಪೋಸ್ಟರ್ ಜೊತೆಗೆ ಚಿತ್ರ ಬಿಡುಗಡೆಯ ದಿನಾಂಕವನ್ನು ಕೂಡ ಚಿತ್ರತಂಡ ಘೋಷಣೆ ಮಾಡಿದೆ. ಮುಂಬರುವ ದೀಪಾವಳಿಯಂದು ಚಿತ್ರ ತೆರೆಗೆ ಬರಲಿದೆಯಂತೆ. ಪೋಸ್ಟರ್ ನಲ್ಲಿ ಅಮೀರ್ ಖಾನ್, ಅಮಿತಾಬ್ ಬಚ್ಚನ್, ಕತ್ರಿನಾ ಹಾಗೂ ಫಾತಿಮಾ ಕಾಣಿಸಿಕೊಂಡಿದ್ದಾರೆ. ಮೊದಲು ನಿರ್ಮಾಪಕರು ಚಿತ್ರದ ಪಾತ್ರಗಳನ್ನು ಒಂದೊಂದಾಗಿ ಜನರ ಮುಂದಿಟ್ಟಿದ್ದರು. ಮೊದಲು ಬಿಗ್ ಬಿ, ನಂತ್ರ ಫಾತಿಮಾ, ನಂತ್ರ ಕತ್ರಿನಾ ಹಾಗೂ ಅಮೀರ್ ಲುಕ್ ರಿವಿಲ್ ಮಾಡಿದ್ದರು. ಚಿತ್ರದ ಟ್ರೈಲರ್ ಸೆಪ್ಟೆಂಬರ್ 27 ರಂದು ಬಿಡುಗಡೆಯಾಗಲಿದೆ. ಚಿತ್ರ ನವೆಂಬರ್ 8 ರಂದು ಚಿತ್ರಮಂದಿರಗಳಿಗೆ ಲಗ್ಗೆ ಇಡಲಿದೆ. ಥಗ್ಸ್ ಆಫ್ ಹಿಂದೂಸ್ತಾನ್ ಚಿತ್ರವನ್ನು ವಿಜಯ್ ಕೃಷ್ಣ ಆಚಾರ್ಯ ನಿರ್ದೇಶಿಸಿದ್ದಾರೆ. ಈ ಚಿತ್ರ ಕಾದಂಬರಿ ಆಧಾರಿತ ಚಿತ್ರವಾಗಿದೆ ಎನ್ನಲಾಗಿದೆ.
Comments